
ಬಂಟ್ವಾಳ: ಜೆಸಿಐ ಬಂಟ್ವಾಳದ ಜೇಸಿ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮದಂಗವಾಗಿ ತಂಬಾಕು ವಿರೋಧಿ ಜಾಗೃತಿ, ಕಾನೂನು ಮಾಹಿತಿ ಶಿಬಿರ ಕಾರ್ಯಕ್ರಮ ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ವಲಯದ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಉದ್ಘಾಟಿಸಿದರು. ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಕಾನೂನು ಮಾಹಿತಿ ನೀಡಿದರು. ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಕವಿತಾ ಹೇಮಚಂದ್ರ ಉಪಸ್ಥಿತರಿದ್ದರು. ಬಳಿಕ ಸಸ್ಯಗಳ ಪೋಷಣೆ, ಸಾರ್ವಜನಿಕ ಆಶ್ರಯಗಳ ನಿರ್ವಹಣೆ ಕಾರ್ಯಕ್ರಮವೂ ಜರುಗಿತು.

ಕಾರ್ಯಕ್ರಮ ದ ಸಂಯೋಜಕರಾದ ದಯಾನಂದ ರೈ, ಮನೋಜ್ ಕನಪಾಡಿ, ವರುಣ್, ಪ್ರಶಾಂತ್, ವಚನ್ ಶೆಟ್ಟಿ, ಅಶ್ವಿನ್ ಮುಂಡಾಜೆ, ಉಮೇಶ್ ಪೂಜಾರಿ, ಪೂರ್ವಧ್ಯಕ್ಷ ಸದಾನಂದ ಬಂಗೇರ,ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಸದಸ್ಯ ರವೀಣ ಬಂಗೇರ ಭಾಗವಹಿಸಿದ್ದರು.
