ಬಂಟ್ವಾಳ: ನೀರಿನ ಅಂತರ್ಜಲ ಕೊರತೆಯ ಬಗ್ಗೆ ಸಂವಾದ ಕಾರ್ಯಕ್ರಮ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘದ ಒಕ್ಕೂಟ ಬಂಟ್ವಾಳ ಇದರ ಅಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದರು, ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಹಾಗೂ ವ್ಯವಸ್ಥಾಪಕಿ ಶಾಂಭವಿ.ಎಸ್.ರಾವ್ , ತಾಲೂಕು ಪಂಚಾಯತ್ ಜಲ್ ಜೀವನ್ ಮಿಷನ್ ಕೇಸ್ ವರ್ಕರ್ ಬಾಲಕೃಷ್ಣ ಮೂಲ್ಯ, ದಿಶಾ ಸಂಸ್ಥೆ ಕೈಕಂಬ ಮಂಗಳೂರು ಇದರ ಯೋಜನಾ ನಿರ್ದೇಶಕ ಸಿಲ್ವೆಸ್ಟರ್ ಡಿ, ಸೋಜಾ, ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಇದರ ಕಾರ್ಯದರ್ಶಿ ದೇವಪ್ಪ ಕುಲಾಲ್, ಮೀನುಗಾರಿಕಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ|ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂಭಕಂಠಿಣಿ ಸಂಘದ ಅಧ್ಯಕ್ಷ ರಾಮಕೃಷ್ಣ ನಾಯಕ್ ಸ್ವಾಗತಿಸಿದರು. ಸಿಲ್ವೆಸ್ಟರ್ ಡಿ ಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಪ್ಪ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ದಿಶಾ ಸಂಸ್ಥೆಯ ಯೋಜನಾ ಸಂಯೋಜಕ ನಿಹಾಲ್ ಮಚಾದೊ ರವರು ವಂದಿಸಿದರು.
ಬಂಟ್ಟಾಳ ತಾಲೂಕಿನ 10 ಪಂಚಾಯತ್ ವ್ಯಾಪ್ತಿಯಲ್ಲಿ ರುವ 40 ಕೃಷಿಕರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ದಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಚಟುವಟಿಕೆಗೆ ಪೂರಕವಾಗಿ ಸಮಿತಿಯನ್ನು ರಚಿಸಲಾಯಿತು
ಚಂದಪ್ಪ ಮೂಲ್ಯ . ದೇವಪ್ಪ ಕುಲಾಲ್ ಸಿಲ್ವೆಸ್ಟರ್ ಡಿ ಸೋಜಾ, ಡಾ ರಾಮಚಂದ್ರ ಭಟ್, ನಿಹಾಲ್ ಮಚಾದೊ ಅವರನ್ನು ಆಯ್ಕೆ ಮಾಡಲಾಯಿತು.
ಮಂಗಳೂರು ನಗರ ಹಾಗೂ ಬಂಟ್ವಾಳ ತಾಲೂಕನ್ನು ಗಮನದಲ್ಲಿಟ್ಟು ಈ ವರ್ಷ ಮಳೆ ಕಡಿಮೆ ಇದ್ದುದರಿಂದ ಕುಡಿಯಲು ಮತ್ತು ಕೃಷಿಗೆ ಮುಂದಿನ ವರ್ಷ ಗಳಲ್ಲಿ ನೀರಿಗೆ ಬರ ಬಾರದಂತೆ ದಿಶಾ ಸಂಸ್ಥೆಯು ಬಂಟ್ವಾಳ ತಾಲೂಕಿನ ಯೋಜನಾ ಕಾರ್ಯ ವ್ಯಾಪ್ತಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಯೋಜನೆ ಜಾರಿ ಮಾಡಿದೆ.
ಮುಂದಿನ ದಿನಗಳಲ್ಲಿ ನೀರಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಡಬೇಕಾಗಿರುವುದರಿಂದ ಬಡಗಬೆಳ್ಳೂರು, ಚೆನೈತ್ತೋಡಿ, ಅಮ್ಚಾಡಿ, ಕರಿಯಂಗಳ, ಕುಕ್ಕಿಪಾಡಿ, ಪಂಜಿಕಲ್ಲು,ರಾಯಿ,ಸಂಗಬೆಟ್ಟು, ಅಮ್ಮುಂಜೆ,ಅರಳ ಸೇರಿದಂತೆ 10 ಗ್ರಾಮಪಂಚಾಯತ್ ಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಇದರ ಸುಮಾರು 2300 ರೈತರ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ “ನೀರಿನ ಅಂರ್ತಜಲ ಕೊರತೆ ಬಗ್ಗೆ ಸಂವಾದ” ಎಂಬ ಕಾರ್ಯಕ್ರಮ ನಡೆಸುವುದು ಅತೀ ಮಹತ್ವದ್ದು ಎಂದು ಗಮನಿಸಿ, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರಲ್ಲಿ ವಿಚಾರ ವಿನಿಮಯ ಮಾಡಿದ ಹಿನ್ನಲೆಯಲ್ಲಿ ಈ ಸಭೆ ನಡೆಸಲಾಗಿದೆ.