ಬಂಟ್ವಾಳ: ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ದ.ಕ.ಜಿಲ್ಲೆ ವತಿಯಿಂದ 3ನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಸಾರ್ವಜನಿಕ ಧನಲಕ್ಷ್ಮೀ ಪೂಜೆ ಬಿ.ಸಿ.ರೋಡ್ ನ ಶ್ರೀ ರಕೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನಗೈದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಾಮಾಜಿಕ ಕಾರ್ಯ ಕರ್ತ, ಕಲಾವಿದ ಬಿ.ಆರ್. ಕಬಕ ಹಾಗೂ ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್ನ ಸಮಾಜ ಮುಖಿ ಕಾರ್ಯ ಗುರುತಿಸಿ, ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಅನಾರೋಗ್ಯ ದಿಂದ ಬಳಲುತ್ತಿದ್ದ ಕಿಶೋರ್ ರಾವ್ ಮೂಡಬಿದಿರೆ ಅವರಿಗೆ ನೆರವು ವಿತರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಪುರುಷೋತ್ತಮ ಮೊಗರ್ನಾಡ್, ಜನಾರ್ದನ ಭಟ್ ಮಂಗಳೂರು, ಶರಣ್ ಪಂಪ್ ವೆಲ್, ಪುನೀತ್ ಕೆರೆಹಳ್ಳಿ, ಭರತ್ ಕುಮ್ಡೇಲ್, ಉದ್ಯಮಿ ಸಂದೇಶ ಶೆಟ್ಟಿ, ನಾಗೇಂದ್ರ ಕುಮಾರ್, ಮಾಧವ ಮಾವೆ, ಪುನೀತ್ ಅತ್ತಾವರ, ಸೌಮ್ಯ, ಹಿಂದೂ ನಾಯಕಿ ಸೌಮ್ಯ ಬೆಂಜನಪದವು, ರತ್ನಾಕರ ಶೆಟ್ಟಿ ಕಲ್ಲಡ್ಕ, ಶಿವಪ್ರಸಾದ್ ಶೆಟ್ಟಿ, ಬೈದರಡ್ಕ ಪ್ರಭಾಕರ ಶೆಟ್ಟಿ ರವೀಂದ್ರ ದಾಸ್, ಪ್ರಾಣೇಶ್ ರಾವ್ ಮಂಗಳೂರು ಉಪಸ್ಥಿತರಿದ್ದರು .ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿಗಾರ್ ಪ್ರಸ್ತಾವನೆಗೈದರು. ಬಿಜೆಪಿ ಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಆಮೂರು ಸ್ವಾಗತಿಸಿ, ಉದಯ ಕೆಲಿಂಜ ನಿರೂಪಿಸಿದರು. ಇದಕ್ಕೂ ಮೊದಲು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆಗೆ ಬಿ.ಸಿ.ರೋಡು ಶ್ರೀ ರಕೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಘುಪತಿ ಭಟ್ ಚಾಲನೆ ನೀಡಿದರು. ವಸಂತ ತಂತ್ರಿ ಪಣಿಕಲ, ಲೋಕೇಶ್ ಭಟ್ ಅಲ್ಲಿಪಾದೆ ಪೌರೋಹಿತ್ಯದಲ್ಲಿ ಧನಲಕ್ಷ್ಮಿ ಪೂಜೆ ನೆರವೇರಿತು.