ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಇದರ 4ನೇ ಶಾಖೆಯಾದ ಕುಕ್ಕಾಜೆ ಶಾಖೆಯ 25ನೇ ವರ್ಷಾಚರಣೆಯ ಅಂಗವಾಗಿ ಸದಸ್ಯ ಗ್ರಾಹಕ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಖೆಯಲ್ಲಿ ಗಣಹೋಮ ಮತ್ತು ಶ್ರೀ ಲಕ್ಷ್ಮೀ ಪೂಜೆಯನ್ನು ನೇರವೆರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಗ್ರಾಹಕರನ್ನು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಅಮೂಲ್ಯ ಸ್ವ-ಸಹಾಯ ಸಂಘಗಳನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಖೆಯ ಏಳಿಗೆಗೆ ಶ್ರಮಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದೆಯು ಇನ್ನೂ ಉತ್ತಮ ಸಹಕಾರ ನೀಡುವಂತೆ ವಿನಂತಿಸಿದರು.
ಸರಕಾರಿ ಪ್ರೌಢ ಶಾಲೆ ಮಂಚಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಕಾರ್ಯಧ್ಯಕ್ಷ ಗಣೇಶ್ ಐತಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘದ ಸ್ಥಾಪಕಾಧ್ಯಕ್ಷ ಡಾ| ಅಮ್ಮೆಂಬಳ ಬಾಳಪ್ಪರವರ ಒಡನಾಟವನ್ನು ನೆನಪಿಸಿದರು. ಪಣೋಲಿಬೈಲು ಕ್ಷೇತ್ರದ ಅರ್ಚಕ ನಾರಾಯಣ ಮೂಲ್ಯ, ಮಹಾದೇವಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮೋಹನ ನಾಯಕ್, ಯಕ್ಷಗಾನ ಕಲಾವಿದ ಮಹಾಬಲ ರೈ ನಗ್ರಿಗುತ್ತು ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಕುಕ್ಕಾಜೆ ಅಧ್ಯಕ್ಷ ಇಬ್ರಾಹಿಂ ಕಟ್ಟಡ ಮಾಲಕ ಜೆಫ್ರಿ ಲೂಯಿಸ್, ರೋಹಿಣಿ ಉಮೇಶ್ಕುಲಾಲ್ ಮಂಚಿ, ಕುಲಾಲ ಸಂಘ ವಿಟ್ಲದ ಅಧ್ಯಕ್ಷ ಬಿ.ಕೆ. ಬಾಬು, ದ.ಕ.ಜಿ.ಹಿ.ಪ್ರಾ. ಶಾಲೆ ಮಂಚಿಯ ಎಸ್ಡಿಎಂಸಿ ಅಧ್ಯಕ್ಷ ಅನ್ಸಾರ್, ಪಿಡಿಓ ನಿರ್ಮಲ, ಸಂಘದ ಉಪಾಧ್ಯಕ್ಷ ಪದ್ಮನಾಭ ವಿ. ಕುಕ್ಕಾಜೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಮತ್ತು ಸಂಘದ ನಿರ್ದೇಶಕ ನಾಗೇಶ್ ಬಾಳೆಹಿತ್ಲು, ಸಲಹಾ ಸಮಿತಿ ಸದಸ್ಯ ನವೀನ ಉಪಸ್ಥಿತರಿದ್ದರು.
ಶ್ರೀ ಪಣೋಳಿಬೈಲು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ವಾಸುದೇವ ಮೂಲ್ಯ ಶ್ರೀ ಕ್ಷೇತ್ರದ ಅನುಗ್ರಹ ಪ್ರಸಾದ ನೀಡಿ ಹರಸಿದರು. ಕು| ಆದ್ಯ ಪಿ.ಬಿ. ಮತ್ತು ಕು| ವಿಂದ್ಯಾ ಪಿ.ಬಿ. ಕಾಂಜಿಲ ಪ್ರಾರ್ಥಿಸಿದರು, ಶಾಖಾ ವ್ಯವಸ್ಥಾಪಕಿ ಸವಿತಾ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವನೆಗೈದರು, ಶಾಖಾ ವ್ಯವಸ್ಥಾಪಕಿ ಕಮಲ ಸಹಕರಿಸಿದರು. ಶಾಖಾ ವ್ಯವಸ್ಥಾಪಕ ಸುಂದರ ಮೂಲ್ಯ ವಂದಿಸಿದರು. ಕಿರಿಯ ಸಹಾಯಕ ಶಿವರಾಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಮ್. ಕೆ., ಶಾಖಾ ವ್ಯವಸ್ಥಾಪಕಿ ಯಶೋದ ಸಹಕರಿಸಿದರು.