ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ ೩೧೭ ಡಿ ಇದರ ಆಶ್ರಯದಲ್ಲಿ ಲಯನ್ಸ್ ಜಿಲ್ಲಾ ಕ್ರೀಡೋತ್ಸವ ಬಂಟ್ವಾಳದ ಎಸ್ವಿಎಸ್ ಮೈದಾನದಲ್ಲಿ ನಡೆಯಿತು.
ಲಯನ್ಸ್ ಜಿಲ್ಲಾ ಸ್ಪೋರ್ಟ್ಸ್ ಪ್ರಧಾನ ಸಂಯೋಜಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಲಯನ್ಸ್ ಕುಟುಂಬದ ಸದಸ್ಯರು ತಮ್ಮ ಕೆಲಸ, ಒತ್ತಡಗಳನ್ನು ಬದಿಗಿಟ್ಟು ಈ ದಿನವನ್ನು ಸಂಭ್ರಮಿದಿಂದ ಕಳೆಯುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಎಲ್ಲರು ಸಕ್ರಿಯವಾಗಿ ಆಟೋಟಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.
ಅಕ್ಷರ ದಾಸೋಹ ಉಪಕಾರ್ಯದರ್ಶಿ ಎಂ.ಪಿ. ಜ್ಞಾನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಪ್ರಜ್ವಲಿಸಿ ಮಾತನಾಡಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಅಪೂರ್ವವಾದುದು. ಶಾಲೆಗಳಿಗೂ ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದೆ. ಇದು ತಮ್ಮ ಸಂತೋಷಕ್ಕಾಗಿ ಮಾಡುವ ಕರ್ಮಯೋಗವಿದ್ದಂತೆ ಎಂದು ತಿಳಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ವಿವಿಧ ವಲಯಗಳಿಂದ ಆಗಮಿಸಿದ ಲಯನ್ಸ್ ಕ್ರೀಡಾಪಟುಗಳ ಫತಸಂಚಲನ ನಡೆದು ಗವರ್ನರ್ ಸಹಿತ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ಜಿಲ್ಲಾ ಗವರ್ನರ್ ಸಂಯೋಜಕಿ ಉಮಾ ಹೆಗ್ಡೆ, ಜಿಲ್ಲಾ ಸಾರ್ವಜನಿಕ ಸಂಪರ್ಕಧಿಕಾರಿ ಶ್ರೀನಿವಾಸ ಪೂಜಾರಿ, ಜಿಲ್ಲಾ ಕಾರ್ಯಕ್ರಮಗಳ ಮುಖ್ಯ ಸಂಯೋಜಕ ರಾಧಕೃಷ್ಣ ರೈ, ಜಿಲ್ಲಾ ಸ್ಪೋಟ್ಸ್ ಸಹ ಸಂಯೋಜಕಿ ವಿದ್ಯಾ ಕಾಮತ್, ಜಿಲ್ಲಾಧ್ಯಕ್ಷರಾದ ತಪೋಧನ್ ಶೆಟ್ಟಿ, ಸಚಿನ್ ಸೂರಜ್ ನೊರೋನ್ಹ, , ಅಭಿಲಾಷ್ ನಾಯಕ್, ಸತ್ಯಪ್ರಸಾದ್ ಶೆಟ್ಟಿ, ಸಂಧ್ಯಾ ರಮಾನಂದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥೇಯ ಘಟಕದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವವಿಧ ಕ್ರೀಡಾಕೂಟಗಳು ನಡೆದವು.