

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಮುಂದಿನ ಎ.4 ರಿಂದ ಎ.9ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ಗುರುವಾರ ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ಸೇವಾ ಸಮಿತಿ ಹಾಗೂ ಬ್ರಹ್ನಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ ನಡೆಯಿತು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಬಿ., ಪ್ರಮುಖರಾದ ಡಾ. ರಮೇಶಾದ ಸೋಮಯಾಜಿ, ಜಗನ್ನಾಥ ಚೌಟ, ವಕೀಲ ಅಶ್ವನಿ ಕುಮಾರ್ ರೈ, ಸಂಜೀವ ಪೂಜಾರಿ ಗುರುಕೃಪಾ, ಸತೀಶ್ ಭಂಡಾರಿ, ಐತಪ್ಪ ಪೂಜಾರಿ, ನಾರಾಯಣ ಹೆಗ್ದೆ , ಬಿ. ಮೋಹನ್, ಲೋಕನಾಥ ಶೆಟ್ಟಿ, ಗೋಪಾಲ ಸುವರ್ಣ, ಸದಾನಂದ ಶೆಟ್ಟಿ ರಂಗೋಲಿ, ಪುರುಷ ಸಾಲ್ಯಾನ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ ನಡೆಸಲಾಯಿತು.
Advertisement







