ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆದ ಪಂಚಾರತಿ ಸೇವೆ ಯಶಸ್ವಿಯಾಗಿ ಸಮಾಪನಗೊಂಡಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ ಕಲಿಯುಗದಲ್ಲಿ ಸಮಸ್ಯೆಗಳು ಸಾಮಾನ್ಯ. ಅವುಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕಾದುದು ನಮ್ಮ ಧರ್ಮ. ನಮಗೆ ಈ ಮಾನವ ಧರ್ಮವು ದೊರಕಿರುವುದು ಪೂರ್ವ ಜನ್ಮದ ಪುಣ್ಯ. ನಾವು ಮಾಡುತ್ತಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ವ ಜನ್ಮದ ಪುಣ್ಯದ ಕಾರ್ಯದಲ್ಲಿ ನಿರ್ಧರಿತ ವಾಗಿದೆ. ಅಯ್ಯಪ್ಪ ಮಂದಿರಕ್ಕೆ ಜಾಗ ಖರೀದಿ ಮಾಡುವ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದರು.



ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಕುಕ್ಕಾಜೆ
ಮಾತನಾಡಿ ಪಂಚಾರತಿ ಸೇವೆಯ ಪರಿಕಲ್ಪನೆಯೇ ಅತ್ಯಂತ ವಿಶಿಷ್ಠವಾದುದು. 18 ಗುರುವಾರದ ಪಂಚಾರತಿ ಸೇವೆಯನ್ನು ಭಕ್ತರಿಗಾಗಿ ಈ ಮಂದಿರದಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಅದು ಈ ಮಂದಿರದ ವಿಶೇಷ ಸೇವೆಯಾಗಿ ಮುಂದುವರಿಯಬೇಕು ಎಂದು ಆಶಿಸಿದರು
ಪಂಚಾರತಿ ಸೇವೆಯಲ್ಲಿ ಅಭ್ಯಾಗತರಾಗಿ ಬಂಟರ ಸಂಘ ಬಂಟವಾಳ ತಾಲೂಕು ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಬಿ.ಸಿ.ರೋಡು ಅಪೂರ್ವ ಜ್ಯುವೆಲ್ಲರ್ಸ್ನ ಮ್ಹಾಲಕ ಸುನೀಲ್ ಬಿ. ಅಪೂರ್ವ, ಕುಕ್ಕಾಜೆ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಕುಕ್ಕಾಜೆ, ಕೊಣಾಜೆ ಭ್ರಾಮರಿ ಆರ್ಟ್ಸ್ನ ಜಯಂತ್ ಮತ್ತು ಅಯ್ಯಪ್ಪ ಮಂದಿರದ ಟ್ರಸ್ಟಿ ಕೃಷ್ಣಪ್ಪ ಬಂಗೇರ ಕಂಚಿಲ ಇವರುಗಳು ಭಾಗವಹಿಸಿ ಪಂಚಾರತಿ ಬೆಳಗಿದರು.
ಮಂದಿರದ ಪ್ರಧಾನ ಅರ್ಚಕರುಗಳಾದ ಸಂಜೀವ ಗುರುಸ್ವಾಮಿ ಅಮ್ಟೂರು, ಕೃಷ್ಣ ಗುರುಸ್ವಾಮಿ ಮಾರ್ನಬೈಲು ಮಹಾಪೂಜೆ ನೆರವೇರಿಸಿದರು.


ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು ಸ್ವಾಗತಿಸಿದರು.
ಆಡಳಿತ ಟ್ರಸ್ಟ್ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಟ್ರಸ್ಟ್ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಖಜಾಂಚಿ ಗಣೇಶ್ ಗುಡ್ಡೆಯಂಗಡಿ, ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ, ಕಾರ್ಯದರ್ಶಿ ತಾರಾ ಭಾಸ್ಕರ್ ಕೊಲ್ಲುಕೋಡಿ, ಭಜನಾ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು, ಗೋಪಾಲ ಮೂಲ್ಯ ನೆಲ್ಲಿ, ರವಿ ಕುಲಾಲ್ ಚೇಳೂರು ಉಪಸ್ಥಿತರಿದ್ದರು.
ಪ್ರಮುಖ ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ನಾಗೇಶ್ ಕುಲಾಲ್ ಕೋಮಾಲಿ, ಚಂದ್ರಶೇಖರ ಗಟ್ಟಿ ಅಂದಾಡಿ, ಶೇಖರ ನಾಯ್ಕ್ ದಾಸರಗುಡ್ಡೆ, ಕೇಶವ ಮಾಸ್ತರ್ ಮಾರ್ನಬೈಲು, ಸಂದೀಪ್ ಕುಮಾರ್ ನಾಗನವಳಚ್ಚಿಲು, ಪುರುಷೋತ್ತಮ ಪೂಜಾರಿ ಕಾರಾಜೆ, ಜನಾರ್ಧನ ಬಂಗೇರ ನಾಗನವಳಚ್ಚಿಲು, ದಯಾನಂದ ಬಿ.ಎಂ. ಕಂದೂರು, ಪುರುಷೋತ್ತಮ ಪೂಜಾರಿ ಕೋಮಾಲಿ, ಸೋಮನಾಥ ಬಿ.ಎಂ. ಕಂದೂರು, ಸತೀಶ್ ಗೌಡ ನಂದಾವರ, ಸೋಮನಾಥ ಗಟ್ಟಿ ಮಾರ್ನಬೈಲು, ವಸಂತ ಪೂಜಾರಿ ನಾಗನವಳಚ್ಚಿಲು, ಗಣೇಶ್ ದೇವಾಡಿಗ ದಾಸರಗುಡ್ಡೆ, ಜಯಾನಂದ ಪಾಡಿ, ಲಕ್ಷ್ಮಣ್ ಗಟ್ಟಿ ನಂದಾವರ, ಜಗದೀಶ್ ಕೆ. ಖಂಡಿಗ, ಗೋಪಾಲ ಪೂಜಾರಿ ದಾಸರಗುಡ್ಡೆ, ಉಮೇಶ್ ಆಚಾರ್ಯ ದಾಸರಗುಡ್ಡೆ, ಪ್ರಸನ್ನ ಆಚಾರ್ಯ ಸಜೀಪ, ಚೇತನ್ ಪೂಜಾರಿ ಮಿತ್ತಮಜಲು, ಸುಧೀರ್ ನಾಯಕ್ ಕಾನ್ಸಾಲೆ, ಅಮರನಾಥ ನಾಯ್ಕ್ ಮಾವಿನಕಟ್ಟೆ, ವಸಂತ ಕುಲಾಲ್ ಕೊಲ್ಲುಕೋಡಿ, ನವೀನ್ ಕುಂದರ್ ಖಂಡಿಗ, ಗೋಪಿನಾಥ ನಾಯ್ಕ್ ದಾಸರಗುಡ್ಡೆ, ಅಕ್ಷಯ್ ಕಾರಾಜೆ ಪ್ರಿಯಾ ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು, ಹೇಮಾ ಕೇಶವ್ ಮಾರ್ನಬೈಲು, ಬಬಿತಾ ಸಂದೀಪ್ ನಾಗನವಳಚ್ಚಿಲು, ಶಕುಂತಲಾ ಅಶೋಕ್ ಗಟ್ಟಿ ಮಾರ್ನಬೈಲು, ರಕ್ಷಿತಾ ರಂಜಿತ್ ರಾವ್ ಬಟ್ಟಡ್ಕ, ಸರೋಜ ವಿಶ್ವನಾಥ ಆಚಾರ್ಯ, ಅಶ್ವಿತ ನಿತಿನ್ ಮಾರ್ನಬೈಲು, ಸಂತೋಷ್ ಆಚಾರ್ಯ ನಾಗನವಳಚ್ಚಿಲು, ದೀಪ್ತೇಶ್ ಮೆಲ್ಕಾರ್, ಪ್ರಶಾಂತ್ ಆಚಾರ್ಯ ಸಜೀಪ, ಪುರಂದರ ಆಚಾರ್ಯ ನಾಗನವಳಚ್ಚಿಲು, ಅಶ್ವಿನ್ ಮಾರ್ನಬೈಲು, ದೇವಪ್ಪ ನಾಯ್ಕ್ ದಾಸರಗುಡ್ಡೆ, ಕಿಶೋರ್ ಕುಮಾರ್ ಪಣೋಲಿಬೈಲು, ಕೀರ್ತನ್ ಸಾಲಿಯಾನ್ ನಂದಾವರ, ಸುಧೀರ್ ನಾಯ್ಕ್ ದಾಸರಗುಡ್ಡೆ, ಮಾಧವ ನಾಯ್ಕ್ ದಾಸರಗುಡ್ಡೆ, ಅಶೋಕ್ ಗಟ್ಟಿ ಮಾರ್ನಬೈಲು ಮತ್ತಿತರರು ಭಾಗವಹಿಸಿದ್ದರು.
Advertisement







