
ಬಂಟ್ವಾಳ: ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ಭಾನುವಾರ ಏರ್ಯಬೀಡುವಿನಲ್ಲಿ ನಡೆಯಿತು,


ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳುಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತ್ ಗೌರವ ಕಾರ್ಯದರ್ಶಿ ವಿ.ಸು. ಭಟ್, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ಕುಮಾರ್,ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ರತ್ನಾಕರ ಶೆಟ್ಟಿ ಮಂಡ್ಯಡ್ಕ ಗುತ್ತು
ಕಲಾವಿದ ಸದಾಶಿವ ಡಿ. ತುಂಬೆ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಶಿಕ್ಷಕ ಜಯರಾಮ ಪಡ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಶವ ಎಚ್.ಕಟೀಲು ಸ್ವಾಗತಿಸಿ, ಏರ್ಯರ ನೆನಪುಗಳನ್ನು ಮೆಲುಕು ಹಾಕಿದರು. ನಲ್ಕೆಮಾರು ಶಾಲೆಯ ಶಿಕ್ಷಕ ಜಗನ್ನಾಥ ವಂದಿಸಿದರು.



ಕಾರ್ಯಕ್ರಮ ಸಂಯೋಜಕ ದಾಮೋದರ್ ಮಾಸ್ತರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಬಲೇಶ್ವರ ಹೆಬ್ಬಾರ್ ಓದುವ ಹವ್ಯಾಸ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಚಿತ್ರ ಕಮ್ಮಟ, ಶಿಕ್ಷಕ ವಿಠಲ್ ನಾಯಕ್ ಮಕ್ಕಳ ಗೀತ ಸಾಹಿತ್ಯ ನಡೆಸಿಕೊಟ್ಟರು. ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು.
Advertisement







