
ಬಂಟ್ವಾಳ: ವೆಲಂಕಣಿ ಮಾತೆ ದೇವಾಲ ಫರ್ಲಾ, ಮಹಿಳಾ ಸಂಘಟನೆ ಫರ್ಲಾ ಘಟಕ, ಮತ್ತು ಸ್ತ್ರೀ ಆಯೋಗ ಫರ್ಲಾ ಇವರ ಸಹಭಾಗಿತ್ವದಲ್ಲಿ ಹಿರಿಯರ ದಿನ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮ ಭಾನುವಾರ ನಡೆಯಿತು. ಚರ್ಚ್ ಧರ್ಮಗುರು ಅತೀ ವಂದನೀಯ ತಿಯೊದೊರಾ ಡಿ ಕ್ಹುನರವರ ಮುಂದಾಳತ್ವದಲ್ಲಿ ಬಲಿ ಪೂಜೆ ನಡೆಯಿತು..


ಚರ್ಚ್ ನ ಸಭಭವನದಲ್ಲಿ ಸಂಘಟನೆಯ ಸ್ತ್ರೀಯರಿಗಾಗಿ ಗಿಡಮೂಲಿಕೆ ಆಯುರ್ವೆದ ಸಸ್ಯಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅತೀ ವಂದನೀಯ ಫಾ.ಮಾರ್ಕ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತೀ ವಂದನೀಯ ಫಾ.ಗಿಲ್ಬರ್ಟ್ ಮಸ್ಕರೇನ್ಹಸ್, ಸಂಪನ್ಮೂಲ ವ್ಯಕ್ತಿಯಾಗಿ ಭಗಿನಿ ಆಗ್ನೇಸ್ ಫ್ರ್ಯಾಂಕ್ (ಬೆಥನಿ) ಭಾಗವಹಿಸಿದ್ದರು.



ಚರ್ಚ್ ಪಾಲನಾ ಸಮಿತಿಯ ಉಪಧ್ಯಾಕ್ಷ ನವಿನ್ ಮಿನೇಜಸ್, ಕಾರ್ಯದರ್ಶಿ ಹಿಲ್ಡಾ ಪಿರೇರಾ, ಆಯೋಗ ಸಂಯೋಜಕಿ ಸುನಿತಾ ರೊಡ್ರಿಗಸ್, ಹಿರಿಯರಾದ ಲಿಯೊ ಮಿನೇಜಸ್, ಸಂಘಟನೆ ಅಧ್ಯಕ್ಷೆ ಐರಿನ್ ಯಂ. ಡಿಸೋಜ, ಕಾರ್ಯದರ್ಶಿ ಜೋಯ್ಸ್ ಡಿಸೋಜಾ ಉಪಸ್ಥಿತಿದ್ದರು.


ಸುನಿತಾ ಬ್ಯಾಪ್ಟಿಸ್ಟ್, ಜ್ಯೋತಿ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘಟನೆಯ ಸದಸ್ಯರು ತಾವೇ ತಯಾರಿಸಿದ ಮಳೆಗಾಲದ ಖಾದ್ಯಗಳೊಂದಿಗೆ ಆಟಿಡೊಂಜಿ ಕೂಟವನ್ನು ಸಂಭ್ರಮಿಸಿದರು.


Advertisement







