
ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವಾರ್ಷಿಕ ಮಹಾಸಭೆಯು ನಿತೀಶ್ ಕುಲಾಲ್ ಪಲ್ಲಿಕಂಡ ಅಧ್ಯಕ್ಷತೆಯಲ್ಲಿ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.



2024-25 ಸಾಲಿನ ವರದಿಯನ್ನು ಕಾರ್ಯದರ್ಶಿ ಪುನೀತ್ ಕಾಮಾಜೆ ವಾಚಿಸಿದರು. ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ರಾಜ್ಯಾಧ್ಯಕ್ಷ ಸುಧಾಕರ್ ಸಾಲ್ಯಾನ್ ಉಪಸ್ಥಿತಿಯಲ್ಲಿ 2025- 26 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ನಡೆದು ಸುಮಿತ್ ಸಾಲ್ಯಾನ್ ಅಧ್ಯಕ್ಷರಾಗಿ , ಜಯಗಣೇಶ್ ಬಂಗೇರ ದಾಸಕೋಡಿ ಪ್ರಧಾನ ಕಾರ್ಯದರ್ಶಿಯಾಗಿ, ಸಂತೋಷ್ ಮಯ್ಯರ ಬೈಲು ಕೋಶಾಧಿಕಾರಿಯಾಗಿ, ದುರ್ಗಾಶ್ರೀ ಪ್ರದೀಪ್ ಮಹಿಳಾ ಸಂಚಾಲಕಿಯಾಗಿ ಮತ್ತು ಎಚ್ಕೆ ನಯನಾಡು ಗೌರವ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಜಿಲ್ಲೆಯ,ವಿಭಾಗೀಯ ಹಾಗೂ ಬಂಟ್ವಾಳ ಯುವ ವೇದಿಕೆ ಪ್ರಮುಖಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Advertisement







