
ಮಂಚಿ: ನಮ್ಮ ಆದಾಯದಲ್ಲಿ ಕನಿಷ್ಠ ಒಂದು ಭಾಗವನ್ನು ಸಮಾಜದಲ್ಲಿ ತೀರಾ ಬಡತನದಲ್ಲಿರುವವರಿಗೆ ದಾನ ಮಾಡಿದರೆ ಸಮಾಜದ ಋಣ ತೀರಿಸಿದಂತಗುತ್ತದೆ. ನಾನು ಕೂಡ ಚಿಕ್ಕವನಿದ್ದಾಗ ಬಡತನದ ರುಚಿಕಂಡವನು ನಿಮ್ಮ ಸ್ನೇಹಮಿಲನ ತಂಡದ ಸೇವಾ ಚಟುವಟಿಕೆ ಶ್ಲಾಘನೀಯ.ಪ್ರಸ್ತುತ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿದರೆ ಆಪತ್ಕಾಲದಲ್ಲಿ ಅದು ನಮ್ಮ ಕೈ ಹಿಡಿಯುತ್ತದೆ ಎಂದು ಹಿರಿಯ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ತಿಳಿಸಿದರು. ಅವರು ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿದ ಸ್ನೇಹ ಮಿಲನ ಕಲ್ಲಡ್ಕ ಇದರ 11ನೇ ವರ್ಷದ ವಾರ್ಷಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪ್ರೌಢ ಶಾಲಾ ವಿಭಾಗದ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರ ಮಟ್ಟದ ಪ್ರದರ್ಶನ ನೀಡಿದ ಜಗನ್ ಏಲ್ತಿಮಾರು ಇವರಿಗೆ ಸಾಧಕ ಸ್ನೇಹಿತ ಪುರಸ್ಕಾರ ನೀಡಲಾಯಿತು. ವರ್ಷಂಪ್ರತಿಯಂತೆ ಈ ವರ್ಷದ ಸಾಂತ್ವನ ನಿಧಿ ರೂ.50 ಸಾವಿರವನ್ನು ಮೂರು ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಯಿತು.


ವೇದಿಕೆಯಲ್ಲಿ
ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಅಧ್ಯಕ್ಷ ಉಮನಾಥ ರೈ ಮೇರಾವು, ಹಾಲು ಉತ್ಪಾದಕರ ಸಹಕಾರಿ ಸಂಘ ಮಂಚಿ ಇದರ ಅಧ್ಯಕ್ಷ ನಿಶ್ಚಲ್. ಜಿ .ಶೆಟ್ಟಿ ಕಲ್ಲಾಡಿ,ಇವರು ಶುಭಾಶಂಷಣೆಗೈದರು. ಪ್ರಗತಿಪರ ಕೃಷಿಕ ಚಿತ್ತರಂಜನ್ ಕರೈ, ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ, ರೈತರ ಸೇವಾ ಸಹಕಾರಿ ಸಂಘ ಕಲ್ಲಡ್ಕ ಇದರ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಗೋಪಾಲ. ಕೆ. ಉಪಸ್ಥಿತರಿದ್ದರು. ವಿಶ್ವನಾಥ ಅಂಚನ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಪ್ರಭು ಮದ್ದಡ್ಕ ಸ್ವಾಗತಿಸಿ ಜಯಪ್ರಕಾಶ ರೈ ವಂದಿಸಿದರು. ರಾಮಪ್ರಸಾದ್ ರೈ ತಿರುವಾಜೆ ಕಾರ್ಯಕ್ರಮ ನಿರೂಪಿಸಿದರು.ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಶುಭ ಹಾರೈಸಿದರು.

ರವೀಂದ್ರ ಸಪಲ್ಯ ಅಧ್ಯಕ್ಷ:
ಕಲ್ಲಡ್ಕ ಸ್ನೇಹಮಿಲದ ಮುಂದಿನ ಸಾಲಿನ ಅಧ್ಯಕ್ಷರಾಗಿ ರವೀಂದ್ರ ಸಪಲ್ಯ ಅವಿರೋಧವಾಗಿ ಆಯ್ಕೆಗೊಂಡರು.

Advertisement







