
ತುಂಬೆ: ಇಲ್ಲಿನ ಗುಲಾಬಿ ಶೆಟ್ಟಿ ಎಜುಕೇಷನ್ಲ್ ಮತ್ತು ಸರ್ವೀಸ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ದಿವೀಶ್ ಪ್ರಿ ಪ್ರೈಮರಿ ಸ್ಕೂಲ್ ತುಂಬೆ, ಇದರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.
ಇಂಗ್ಲೀಷ್ ವಿಝಾರ್ಡ್ ಫೌಂಡೇಶನ್ ಇದರ ಜಿಲ್ಲಾ ಸಂಯೋಜಕ ಪ್ರದೀಪ್ ಪೈ ದೀಪ ಪ್ರಜ್ವಲಿಸಿದರು. ಟ್ರಸ್ಟ್ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಟ್ರಸ್ಟಿ ಸುಕನ್ಯಾ ಎನ್.ಶೆಟ್ಟಿ, ಶಾಲಾ ಸಂಚಾಲಕಿ ಉಷಾ ಚಂದ್ರಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ಸ್ವಾತಿಶ್ರೀ, ಉಷಾ, ರುಬೀನಾ ಸಹಕರಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.

