

ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ಷೇತ್ರದ ವಿವಿದೆಡೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 22.29 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಎಂಟು ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭಾನುವಾರ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು ಬಂಟ್ವಾಳ ಕ್ಷೇತ್ರದಲ್ಲಿಯು 266 ಕೋ.ರೂ.ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಿಸಿ ನೀರನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅಂರ್ತಜಲವು ವೃದ್ಧಿಯಾಗಿ ಕೃಷಿ ಭೂಮಿ, ಕುಡಿಯುವ ನೀರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಾಣಿ ಗ್ರಾಮದ ಅರ್ಬಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಸಜಿಪಮೂಡ ಕಲ್ಲಕುಮೇರುವಿನಲ್ಲಿ, ವಿಟ್ಲಪಡ್ನೂರು ಗ್ರಾಮದ ಮೂರ್ಗಜೆಯಲ್ಲಿ, ಕೊಳ್ನಾಡು ಗ್ರಾಮದ ಕಟ್ಟತ್ತಿಲಮಠದಲ್ಲಿ, ಮಣಿನಾಲ್ಕೂರು ಗ್ರಾಮದ ಬಾರೆತ್ಯಾರುವಿನಲ್ಲಿ, ಅಜ್ಜಿಬೆಟ್ಟು ಗ್ರಾಮದ ಕಳಸಡ್ಕದಲ್ಲಿ ಕರೋಪಾಡಿಯ ದೇವಸ್ಯದಲ್ಲಿ, ರಾಯಿ ಗ್ರಾಮದ ಮಿಯಾಳಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಇವುಗಳ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.

ಈ ಸಂದರ್ಭ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಪಡ್ನೂರು ಗ್ರಾ.ಪಂ.ಅಧ್ಯಕ್ಷೆ ರೇಶ್ಮಾ ಶಂಕರಿ,ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಸಜೀಪಮೂಡ ಗ್ರಾ.ಪಂ.ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು, ಪ್ರಶಾಂತ್ ವಿಟ್ಲುಕೋಡಿ, ಗೋಳ್ತಮಜಲು ಗ್ರಾ.ಪಂ.ಸದಸ್ಯ ಎಲಿಯಾಸ್ ಡಿಸೋಜ, ಸುಂದರಿ ಬೊಳ್ಳಾಯಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಂಕೇಶ, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಸದಸ್ಯ ಸಂತೋಷ್ ರಾಯಿಬೆಟ್ಟು, ಚೆನ್ನೈತ್ತೋಡಿ ಗ್ರಾ.ಪಂ.ಸದಸ್ಯರಾದ ರವಿರಾಮ ಶೆಟ್ಟಿ ಕಂಚಾರು, ಪುಪ್ಪಾವತಿ ರಾಮಣ್ಣಪೂಜಾರಿ, ಮುತ್ತಮ್ಮ ಮೂಲ್ಯ, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಸರೋಜಿನಿ, ದಯಾನಂದ ನಾಯ್ಕ್, ಧನಂಜಯ ಶೆಟ್ಟಿ, ರಾಮಕೃಷ್ಣಮಯ್ಯ, ರಘುರಾಮ ಮಯ್ಯ, ಸಾಯಿ ಶಾಂತಿಕೋಡಿ, ಶರ್ಮಿತ್ ಜೈನ್, ಬಿಜೆಪಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ನಾಯ್ಕ್ ನಗ್ರಿ, ವಸಂತ ಕಲ್ಲಗುಂಡಿ, ಪ್ರಭಾಕರ ಪ್ರಭು, ರಮಾನಾಥ ರಾಯಿ, ದಿನೇಶ್ ಸುವರ್ಣ ರಾಯಿ, ಶಿವಪ್ರಸಾದ್ ಶೆಟ್ಟಿ, ಭೋಜರಾಜ ಶೆಟ್ಟಿ, ಗೋಪಾಲಕೃಷ್ಣ ಚೌಟ, ದಿನೇಶ್ ಶೆಟ್ಟಿ ದಂಬೇದಾರು, ಪ್ರಕಾಶ್ ಪೂಜಾರಿ ಕಲ್ಲುಕೊಡಂಗೆ, ಉಮೇಶ್ ಶೆಟ್ಟಿ ಭಂಡಾರಿಬೆಟ್ಟು, ಮಹಾಲಿಂಗ ಶರ್ಮ, ನಾಗೇಶ್, ಗಣನಾಥ ಶೆಟ್ಟಿ, ಶ್ಯಾಮಪ್ರಸಾದ್ ಪೂಂಜ, ಬೇಬಿ ಗೌಡ, ಪ್ರಶಾಂತ ಪೂಜಾರಿ, ರವೀಂದ್ರಶೆಟ್ಟಿ, ಆನಂದ ಶೆಟ್ಟಿ, ರಾಜೇಂದ್ರ ಕಡಮಜೆ, ವಸಂತ ಪೂಜಾರಿ ಡೆಚ್ಚಾರ್, ವಾಣಿಗಣೇಶ್, ವಾಲ್ಟರ್ ಮೋರಸ್, ಶಾಂತಪ್ಪ ಪೂಜಾರಿ ಸಣ್ಣನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಈ ಸಂದರ್ಭ ಉಪಸ್ಥಿತರಿದ್ದರು.
