
ಬಂಟ್ವಾಳ: ಸಜೀಪ ಮಾಗಣೆ ಮಂಜದಗೋಳಿ ಗಡುವಾಡು ಸ್ಥಳದಲ್ಲಿ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣ ಗೊಂಡ ಶ್ರೀನಾಲ್ಕೈತ್ತಾಯ ದೈವದ ಕಟ್ಟೆ ಲೋಕಾರ್ಪಣೆ ಶುಕ್ರವಾರ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಸಂಪನ್ನ ಗೊಂಡಿತು. ಗಡಿ ಪ್ರಧಾನರಾದ ಗಣೇಶ್ ನಾಯ್ಕ್ ಯಾನೆ ಉಗ್ಗ ಶೆಟ್ಟಿ, ದೇವಿ ಪ್ರಸಾದ್ ಪೂಂಜ ಕೋಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಛ ಪೂಜಾರಿ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

