ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲ ಶ್ರೀಧರ್ಮರಸು ವೈದ್ಯನಾಥ ಜುಮಾದಿ ಬಂಟ ದೈವಗಳ ವಾರ್ಷಿಕ ಮೂರು ದಿನಗಳ ನೇಮೋತ್ಸವವು ಊರ, ಪರವೂರ ಜನರ ಕೂಡುವಿಕೆ ಹಾಗೂ ಗ್ರಾಮದ ಮನೆತನಗಳ ಮತ್ತು ಅಡೆಪಿಲ ಭಂಡಾರದ ಮನೆಯ ವಾರೀಸು ಕುಟುಂಬಸ್ಥರ ಉಪಸ್ಥಿತಿಯೊಂದಿಗೆ ವಿದ್ಯುಕ್ತವಾಗಿ ಸಂಪನ್ನಗೊಂಡಿತು.
ಮೊದಲ ದಿನದಂದು ಶ್ರೀ ವೈದ್ಯನಾಥ ಜುಮಾದಿ ದೈವಗಳ ಕಿರುವಾಲು ವೈದ್ಯನಾಥ ಭಂಡಾರದ ಮನೆಯಿಂದ ಹೊರಟು ಅಡೆಪಿಲ ಶ್ರೀ ಧರ್ಮರಸು ಅಲಂಗಾರ ಮಾಡದಲ್ಲಿ ನೆಮೋತ್ಸವ ನಡೆಯಿತು. ಎರಡು ಮತ್ತು ಮೂರನೇ ದಿನ ಅಡೆಪಿಲ ದಿಂಡಿಕೆರೆ ಜೋಡುಸ್ಥಾನದಲ್ಲಿ ಶ್ರೀವೈದ್ಯನಾಥ ಮತ್ತು ಜುಮಾದಿ ದೈವಗಳಿಗೆ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೈವದ ಪ್ರಧಾನ ಅರ್ಚಕ, ಜಗನ್ನಾಥ ಪೂಜಾರಿ, ಶೇಖರ ಕೋಟ್ಯಾನ್, ಸೀತರಾಮ ಪೂಜಾರಿ, ಒಂದನೇ ಮನೆಯ ಹಿರಿಯರಾದ ವಿಶ್ವನಾಥ ಇರಂತಬೆಟ್ಟು, ಗುತ್ತಿನ ಮನೆಯವರು, ಅಡೆಪಿಲ ಭಂಡಾರದ ಮನೆಯ ಹಿರಿಯರಾದ ಜನಾರ್ಧನ ಧರ್ಮಸ್ಥಳ, ಹಿಮಕರ ಪೂಜಾರಿ, ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷೆ ಮೀನ ಭಗವಾನ್ ದಾಸ್, ಕಾರ್ಯದರ್ಶಿ ಡಾ. ನವೀನ್ ಬಪ್ಪಳಿಗೆ ಸ್ಥಾನದ ಮನೆಯ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.