Author: admin
ಲಯನ್ಸ್ ಕ್ಲಬ್ ಬಂಟ್ವಾಳ 2023-24 ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ಚಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಪದಗ್ರಹಣ ಅಧಿಕಾರಿ ಪೂರ್ವ ಜಿಲ್ಲಾ ಗವರ್ನರ್ ಡಾ. ಗೀತ್ ಪ್ರಕಾಶ್ ಮಾತನಾಡಿ ಪರೋಪಕಾರ ಕಾಟಚಾರವಾಗದೆ ನಿಜಾರ್ಥದ ಸೇವೆಯನ್ನು ನೀಡಬೇಕು. ನಾವು ಮಾಡುವ ಉತ್ತಮ ಕಾರ್ಯಗಳಿಂದ ನಮ್ಮ ಜೀವಿತಾವಧಿಯಲ್ಲಿಯೇ ಸ್ವರ್ಗ ವನ್ನು ಸೃಷ್ಟಿಸಲು ಸಾಧ್ಯವಿದೆ ಅಂತಹ ಸೇವಾ ಕಾರ್ಯವನ್ನು ಲಯನ್ಸ್ ಕ್ಲಬ್ ಮಾಡುತ್ತಿದ್ದು ಲಯನ್ಸ್ ಕ್ಲಬ್ ನ ಸದಸ್ಯರು ಭಾಗ್ಯವಂತರು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುದ್ರೋಳಿ ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ಆರ್. ಮಾತನಾಡಿ ಲಯನ್ಸ್ ಶಿಸ್ತು ಬದ್ದ ಹಾಗೂ ಸ್ವಾರ್ಥ ರಹಿತ ಸೇವೆಯನ್ನು ನೀಡುವ ಸಂಸ್ಥೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಲಯನ್ಸ್ ಕ್ಲಬ್ ನಿಂದ ಆಗಬೇಕಾಗಿದೆ. ಸರಕಾರದ ಯೋಜನೆಗಳನ್ನು ಅರ್ಹ ಜನರಿಗೆ ಮುಟ್ಟಿಸುವ…
ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಬಂಟ್ವಾಳ: ಸರ್ಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ವಿದ್ಯಾರ್ಥಿ ಸಂಘ ಉದ್ಘಾಟಿಸಿದರು. ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ Advertisement ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಶ್ರೀಧರ್ ಎಚ್. ಜಿ. ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ಸಂವಿಧಾನದ ಮಹತ್ವವನ್ನು ವಿವರಿಸುತ್ತಾ ಕಾಲೇಜಿನ ನೀತಿ ನಿಯಮಗಳನ್ನು ಪಾಲಿಸುವ ಅವಶ್ಯಕತೆಯನ್ನು ತಿಳಿ ಹೇಳಿದರು.ಸರಕಾರಿ ಪದವಿ ಪೂರ್ವ ಕಾಲೇಜು, ಸಿದ್ಧಕಟ್ಟೆಯ ರಾಜ್ಯ ಶಾಸ್ತ್ರ ಉಪನ್ಯಾಸಕ ಶೀನಪ್ಪ ಎನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿ ಸಂಸತ್ ನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಇರಬೇಕಾದ ಪ್ರಾಮಾಣಿಕತೆ, ಪ್ರಯತ್ನ ಶೀಲತೆ ಹಾಗೂ ಬಾಳಿಗೊಂದು ಗುರಿ ಇರಬೇಕಾದ ಅಗತ್ಯತೆಯನ್ನು ವಿವರಿಸಿದರು. ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ…
ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ ಬಂಟ್ವಾಳ: ಇಲ್ಲಿನ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಬಿ. ಸಿ ರೋಡಿನ ಆಡಳಿತ ಸೌಧದ ಮುಂಭಾಗದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಯಿತು. Advertisement ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ ಪ್ರತಿಭಟನೆಯ ಬಳಿಕ ಸುದ್ದಿಗಾರರರೊಂದಿಗೆ ರಮಾನಾಥ ರೈ ಮಾತನಾಡಿ ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಹುಲ್ ಗಾಂಧಿಯವಬರ ಸದಸ್ಯತ್ವವನ್ನು ಅನರ್ಹಗೊಳಿಸಿ ಲೋಕಸಭೆಯಲ್ಲಿ ಪ್ರತಿಪಕ್ಷದ ಧ್ವನಿಯಾಗಿ ಮಾತನಾಡುವ ಅವಕಾಶವನ್ನು ನಿರಾಕರಿಸಲಾಗಿದೆ, ಪ್ರಧಾನಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಜನರಿಗೆ ತಪ್ಪಾಗಿ ಅರ್ಥೆಸಿ, ಬಿಜೆಪಿಯ ಕುಮ್ಮಕ್ಕಿನಂತೆ ಪಿತೂರಿಯ ಭಾಗವಾಗಿ ಅವರ ಲೋಕಸಭಾ ಸದಸದ್ಯತ್ವವನ್ನು ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಹಿತ ಅನೇಕ ಕಾಂಗ್ರೆಸ್ ಮುಖಂಡರ…
ಸಜೀಪಮೂಡ : ಸರಕಾರಿ ಪ್ರೌಢಶಾಲೆಯಲ್ಲಿ ಜ್ಞಾನಜ್ಯೋತಿ ರಂಗಮಂದಿರ ಉದ್ಘಾಟನೆ ಬಂಟ್ವಾಳ: ಜೆಸಿಐ ಬಂಟ್ವಾಳದ ನೇತೃತ್ವದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಲ್ಲಿ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ನಿರ್ಮಾಣಗೊಂಡ ಜ್ಞಾನ ಜ್ಯೋತಿ ರಂಗಮಂದಿರವನ್ನು ಜೆಸಿಐನ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಮಂಗಳವಾರ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಂಗ ಮಂದಿರ ಅತ್ಯಂತ ಅಗತ್ಯವಾಗಿದ್ದು ಜೆಸಿಐ ಬಂಟ್ವಾಳ ಇದನ್ನು ಶಾಲೆಗೆ ಒದಗಿಸಿಕೊಟ್ಟಿರುವುದು ಶ್ಲಾಘನೀಯ ಎಂದರು. ವಲಯ ೧೫ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಶುಭ ಕೋರಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಜೆಸಿಐನ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಅವರನ್ನು ಘಟಕಕ್ಕೆ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಅವರ್‍ನು ಸನ್ಮಾನಿಸಲಾಯಿತು. ರಂಗ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಲೋಕೇಶ್ ಸುವರ್ಣ, ಯತೀಶ್ ಕರ್ಕೆರಾ, ಅಶ್ವಿನ್ ಮುಂಡಾಜೆ ಅವರನ್ನು ಗೌರವಿಸಲಾಯಿತು. Advertisement Advertisement ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷ ಅಜಿತ್…
ರೊಟರಿ ಕ್ಲಬ್ ಬಂಟ್ವಾಳದ 2023-24 ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 2023-24 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಬಿ.ಎ. ಸೋಮಯಾಜಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.ನಿರ್ಗಮನ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಮಾತನಾಡಿ ಕ್ಲಬ್ ಅತ್ಯುತ್ತಮ ಸೇವೆ ಮಾಡಿ ಪ್ಲಾಟಿನಂ ಪ್ಲಸ್ ಪ್ರಶಸ್ತಿ ಪಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ರೊಟರಿ ಕ್ಲಬ್ ಬಂಟ್ವಾಳದ 2023-24 ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆನ್ಸ್ ಅಧ್ಯಕ್ಷೆ ಪ್ರೇಮರಾವ್ ಅನಿಸಿಕೆ ವ್ಯಕ್ತಪಡಿಸಿದರು.ನೂತನ ಅಧ್ಯಕ್ಷರಾಗಿ ಪ್ರಕಾಶ್ ಬಾಳಿಗ, ಕಾರ್ಯದರ್ಶಿಯಾಗಿ ಸದಾಶಿವ ಬಾಳಿಗ ಮತ್ತಿತರ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.ನೂತನ ಅಧ್ಯಕ್ಷ ಪ್ರಕಾಶ್ ಬಾಳಿಗ ಮಾತನಾಡಿ 54 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಕ್ಲಬ್ ಬಂಟ್ವಾಳ ಸಮಾಜ ಮುಖಿ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಗುರುತಿಸಿಕೊಂಡಿದ್ದು ಪ್ರಸ್ತುತ ಸಾಲಿನಲ್ಲೂ ಸೇವಾ ಕಾರ್ಯ ಮಾಡಲು ಸಹಕಾರ ನೀಡುವಂತೆ ವಿನಂತಿಸಿಕೊಂಡರು. Advertisement ಕಾರ್ಯಕ್ರಮದಲ್ಲಿ…
ಫ್ಲೈ ಓವರ್ ಮೇಲಿಂದ ಚಿಮ್ಮುತ್ತಿದ್ದ ನೀರಿನ ಸಮಸ್ಯೆಗೆ ಮುಕ್ತಿ, ಮಳೆಯಲ್ಲಿಯೇ ಶ್ರಮದಾನ ನಡೆಸಿದ ಜೆಸಿಐ ಬಂಟ್ವಾಳದ ಸದಸ್ಯರು ಬಂಟ್ವಾಳ: ವಾಹನಗಳ ಸಂಚಾರದ ವೇಳೆ ಬಿ.ಸಿ.ರೋಡಿನ ಮೇಲ್ಸೆತುವೆಯ ಮೇಲಿಂದ ಏಕಾಏಕಿ ಚಿಮ್ಮಿತ್ತಿದ್ದ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೆಸಿಐ ಬಂಟ್ವಾಳದ ಸದಸ್ಯರು ಶನಿವಾರ ಮಧ್ಯಾಹ್ನದ ವೇಳೆಗೆ ಶ್ರಮದಾನ ನಡೆಸಿ, ಫ್ಲೈ ಓವರ್‌ನ ರಂಧ್ರಗಳಲ್ಲಿ ತುಂಬಿ ಕೊಂಡಿದ್ದ ಪ್ಲಾಸ್ಟಿಕ್ ಹಾಗೂ ಹೂಳನ್ನು ತೆರವುಗೊಳಿಸಿ ಅಲ್ಲಿ ಕೆರೆಯಂತೆ ಸಂಗ್ರಹಗೊಳ್ಳುತ್ತಿದ್ದ ನೀರನ್ನು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟರು. ಫ್ಲೈ ಓವರ್ ಮೇಲಿಂದ ಚಿಮ್ಮುತ್ತಿದ್ದ ನೀರಿನ ಸಮಸ್ಯೆಗೆ ಮುಕ್ತಿ, ಮಳೆಯಲ್ಲಿಯೇ ಶ್ರಮದಾನ ನಡೆಸಿದ ಜೆಸಿಐ ಬಂಟ್ವಾಳದ ಸದಸ್ಯರು ಕಳೆದ ಹಲವು ದಿನಗಳಿಂದ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಮೇಲ್ಸೆತುವೆಯ ಮೇಲೆ ನೀರು ಸಂಗ್ರಹಗೊಂಡು ವಾಹನಗಳು ರಭಸವಾಗಿ ಚಲಿಸುವ ವೇಳೆ ಅದು ಚಿಮ್ಮಿ ಕೆಳಭಾಗದಲ್ಲಿ ನಡೆದುಕೊಡು ಹೋಗುವ, ರಸ್ತೆದಾಟುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದು ಮೈಯಿಡೀ ಒದ್ದೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಅವ್ಯವಸ್ಥೆಯ ವಿರುದ್ದ…
ಜು.8 ರೋಟರಿ ಕ್ಲಬ್ ಬಂಟ್ವಾಳದ 2023-24 ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 8ರಂದು ಸಂಜೆ 6.30ಕ್ಕೆ ರೋಟರಿ ಬಿ.ಎ.ಸೋಮಯಾಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ತಿಳಿಸಿದರು.ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. Advertisement Advertisement ಪೂರ್ವ ಗವರ್ನರ್ ಕೆ. ಕೃಷ್ಣ ಶೆಟ್ಟಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸುವರು, ಮುಖ್ಯ ಅತಿಥಿಗಳಾಗಿ ಸಹಾಯಕ ಗವರ್ನರ್ ಲಾರೆನ್ಸ್ ಗೋಂಸಾಲ್ವ್‌ಸ್, ವಲಯ ಲೆಫ್ಟಿನೆಂಟ್ ರವೀಂದ್ರ ದರ್ಬೆ, ಉದ್ಯಮಿ ಸುಬ್ರಾಯ ಎಂ. ಪೈ ಭಾಗವಹಿಸುವರು ಎಂದು ತಿಳಿಸಿದರು. 54 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರೋಟರಿ ಕ್ಲಬ್ ಬಂಟ್ವಾಳದ ಸದಸ್ಯ ಪ್ರಕಾಶ್ ಕಾರಂತ್ ಅವರು ಜಿಲ್ಲಾ ಗವರ್ನರ್ ಆಗಿರುವುದು ನಮ್ಮ ಕ್ಲಬ್ಬಿಗೆ ಹೆಮ್ಮೆಯ ಸಂಗತಿಯಾಗಿದೆ. ಸೂರಿಲ್ಲದವರಿಗೆ ಮನೆ ನಿರ್ಮಾಣ, ವಿದ್ಯುತ್ ಸಂಪರ್ಕ ಇಲ್ಲದ ಒಂದು ಗ್ರಾಮಕ್ಕೆ ವಿದ್ಯುದೀಕರಣ, ಆರೋಗ್ಯ…
ಭದ್ರಾ ಇನ್ ಆಂಡ್ ಔಟ್ ಸ್ಟೋರ್‌ನ ನೂತನ ಮಳಿಗೆ ಶುಭಾರಂಭ ಬಂಟ್ವಾಳ: ತಾಲೂಕಿನಾದ್ಯಂತ ಮನೆಮಾತಾಗಿರುವ ಭದ್ರ ಹೋಮ್ ಅಪ್ಲೈಯನ್ಸಸ್ ಪ್ರಸ್ತುತ ಪಡಿಸುವ ಭದ್ರಾ ಇನ್ ಆಂಡ್ ಔಟ್ ಸ್ಟೋರ್‌ನ ನೂತನ ಮಳಿಗೆ ಬಂಟ್ವಾಳದ ಬಸ್ತಪಡ್ಪುವಿನಲ್ಲಿ ಶುಭಾರಂಭಗೊಂಡಿತು. ಬಂಟ್ವಾಳದ ಜನತೆಗೆ ಮತ್ತೊಂದು ಸುಭದ್ರ ಭರವಸೆಯ ಆಯ್ಕೆ ಎನ್ನುವಂತೆ ಭಾರತ್‌ಪೆಟೋಲಿಯಂನ ಸಹಯೋಗದಲ್ಲಿ ಭದ್ರಾ ಇನ್ ಆಂಡ್ ಔಟ್ ಸ್ಟೋರ್ ಬಂಟ್ವಾಳದಲ್ಲಿ ಕಾರ್ಯರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಔಟ್‌ಲೆಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭದ್ರಾ ಇನ್ ಆಂಡ್ ಔಟ್ ಸ್ಟೋರ್‌ನ ನೂತನ ಮಳಿಗೆ ಶುಭಾರಂಭ ಭದ್ರಾ ಇನ್ ಆಂಡ್ ಔಟ್ ಸ್ಟೋರ್‌ನ ನೂತನ ಮಳಿಗೆ ಶುಭಾರಂಭ ರೋಟರಿ ಕ್ಲಬ್‌ನ ಜಿಲ್ಲಾ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ಭದ್ರ ಗ್ಯಾಸ್ ಏಜೆನ್ಸಿ ಸಂಸ್ಥೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಮಂಜುನಾಥ ಆಚಾರ್ಯ ವಿಶೇಷ ಮುತುವರ್ಜಿಯಿಂದ ಭಾರತ್ ಪೆಟ್ರೋಲಿಯಂ ಸಹಯೋಗದೊಂದಿಗೆ ಹೊಸ ಸೂಪರ್ ಮಾರ್ಕೆಟ್…
ಬಂಟ್ವಾಳ : ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲೊರೆಟ್ಟೊ ಹಿಲ್ಸ್ ನ ಸಭಾಂಗಣದಲ್ಲಿ ನಡೆಯಿತು.ಪದಗ್ರಹಣ ಅಧಿಕಾರಿ ಪೂರ್ವ ಜಿಲ್ಲಾ ಗವರ್ನರ್ ರಂಗನಾಥ ಭಟ್ ಮಾತನಾಡಿ, ಸಾಮಾಜಿಕ ಸೇವೆ ಮಾಡಲು ರೋಟರಿ ಕ್ಲಬ್ ಪೂರಕವಾಗಿದೆ. ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅತ್ಯಂತ ಕಡಿಮೆ ಅವಽಯಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿದ್ದ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ರೋಟರಿ ಕ್ಲಬ್ ಲೊರಟ್ಟೊ ಹಿಲ್ಸ್ ವಿಶಿಷ್ಠವಾದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದು ಜಿಲ್ಲೆಯಲ್ಲಿ ಅಮೋಘ ಕ್ಲಬ್ ಆಗಿ ಮೂಡಿ ಬರಲಿದೆ ಎಂದರು. ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್: ನೂತನ ಪದಾಧಿಕಾರಿಗಳ ಪದಗ್ರಹಣ ನಿರ್ಗಮನ ಅಧ್ಯಕ್ಷೆ ಶ್ರುತಿ ಮಾಡ್ತಾ ಅವರು ಮಾತನಾಡಿ, ತನ್ನ ಅವಽಯಲ್ಲಿ ಕ್ಲಬ್ ವಿಶೇಷ ಸೇವಾ ಚಟುವಟಿಕೆಯನ್ನು ಮಾಡಿದ ಹಿನ್ನೆಲೆಯಲ್ಲಿ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದರು. Advertisement ನೂತನ ಅಧ್ಯಕ್ಷರಾಗಿ ಸಂಘಟಕ ರಾಮಚಂದ್ರ ಶೆಟ್ಟಿಗಾರ್,…
ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ಉದ್ಘಾಟನಾ ಸಮಾರಂಭ ಬಂಟ್ವಾಳ: ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ಉದ್ಘಾಟನಾ ಸಮಾರಂಭ ಮಂಗಳವಾರ ಸಂಜೆ ಲೊರೆಟ್ಟೋ ಪದವಿನಲ್ಲಿರುವ ಲೊರೆಟ್ಟೋ ಮಾತಾ ಸಭಾಂಗಣದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ರಾಜಗೋಪಾಲ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕ್ಯಾಟರಿಂಗ್ ವೃತ್ತಿನಿರತರು ಸಂಘಟಿತರಾದಾಗ ಕಷ್ಟ ಸಂದರ್ಭವನ್ನು ಎದರಿಸಲು ಸಾಧ್ಯವಿದೆ ಎಂದು ತಿಳಿಸಿದರು. ನಾಲ್ಕು ವರ್ಷದ ಹಿಂದೆ ಜಿಲ್ಲಾ ಸಂಘ ಆರಂಭಗೊಂಡಿತ್ತು, ಇದೀಗ ಮೊದಲ ವಲಯವಾಗಿ ಬಂಟ್ವಾಳ ವಲಯ ಉದ್ಘಾಟನೆಗೊಂಡಿರುವುದು ಅಭಿನಂದನೀಯ, ವಲಯದ ಸ್ಥಾಪನೆಗೆ ಕ್ಯಾಟರಿಂಗ್ ಮಾಲಕರು ಹಲವು ತಿಂಗಳಿನಿಂದ ಪರಿಶ್ರಮ ಪಡುತ್ತಿದ್ದು ಇದೊಂದು ಬಲಿಷ್ಠ ಸಂಘಟನೆಯಾಗಿ ಮೂಡಿ ಬರಲಿ ಎಂದು ಆಶಿಸಿದರು. Advertisement Advertisement ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಡುಗೆ ಕೆಲಸ ಸುಲಭವಾಗಬೇಕು ಎನ್ನುವ ಉದ್ದೇದಿಂದ ಕ್ಯಾಟರಿಂಗ್ ಉದ್ಯಮ ಅಸ್ಥಿತ್ವಕ್ಕೆ ಬಂತು. ಈಗ ಪ್ರತಿಯೊಂದು ಕಾರ್ಯಕ್ರಮಕ್ಕೂ ಕ್ಯಾಟರಿಂಗ್…








