
ಬಂಟ್ವಾಳ: ಸಮನ್ವಯ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಮಹಿಳೆಯರಿಗೆ 6 ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಮೈಂದಾಳದಲ್ಲಿ ನಡೆಯಿತು.
ಫರ್ಲಾ ಚರ್ಚ್ ನ ಧರ್ಮಗುರು ವಂ.ಸುನೀಲ್ ಮಿರಾಂದಾರವರು ಉದ್ಘಾಟಿಸಿ ಮಾತನಾಡಿ ಮಹಿಳೆ ಸಬಲೆಯಾದರೆ , ಕುಟುಂಬ ಮತ್ತು ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.


ಸಂಸ್ಥೆಯ ನಿರ್ದೇಶಕರಾದ ವಂ. ಡಾ ರೊನಾಲ್ಡ್ ಕುಟಿನ್ಹೊರವರು ಸಂಸ್ಥೆಯ ಹಾಗೂ ತರಬೇತಿಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ನವೀನ್ ಮಿನೇಜಸ್, ಹಿಲ್ಡಾ ಪಿರೇರಾ, ಹೊಲಿಗೆ ಶಿಕ್ಷಕಿ ವಿನಯ ಹಾಗೂ ಐರಿನ್ ಡಿಸೋಜ ಉಪಸ್ಥಿತರಿದ್ದರು. ಜೋಯ್ಸ್ ಡಿಸೋಜರವರು ಸ್ವಾಗತಿಸಿ, ಐರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.