ಪುತ್ತೂರು: ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ಪುತ್ತೂರು ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶಿವ ಆರ್ಕೇಡ್ನಲ್ಲಿ ಮಂಗಳವಾರ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಸರಸ್ವತಿ ಕ್ರೆಡಿಟ್ ಸೌಹಾರ್ದಸಹಕಾರಿ ನಿ. ಅಧ್ಯಕ್ಷ ಎಸ್. ಆರ್ ಸತಿಶ್ಚಂದ್ರ ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಸದಸ್ಯರಿಗೆ ಏಕ ರೂಪದಲ್ಲಿ ಲಾಭಾಂಶ ಹಂಚುವ ವ್ಯವಸ್ಥೆ ಸಹಕಾರಿ ಸಂಘಗಳಲ್ಲಿ ಮಾತ್ರ ಇದೆ. ಇದು ಸಮಾಜದ ಆಸ್ತಿ, ಎಲ್ಲರೂ ಜೊತೆಯಾಗಿ ಬೆಳೆಯುವ ಸಾಧನ. ಪಾರದರ್ಶಕವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಿದೆ ಎಂದರು. ನಾವು ಬೆಳೆದಿದ್ದೇವೆ, ಇನ್ನೂ ಬೆಳೆಯಬೇಕಾಗಿದೆ. ಇದರ ಜೊತೆಗೆ ಸಮಾಜವನ್ನು ಬೆಳೆಸಬೇಕಾಗಿದೆ. ದೇಶ ಅಭಿವೃದ್ಧಿ ಕಾಣಲು ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಇದೆ ಎಂದ ಅವರು ಸವಿತಾ ಸೌಹಾರ್ದ ಸಹಕಾರಿ ಸಂಘ ಹೆಚ್ಚು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಸಂಘಗಳು ಕೇವಲ ಆರ್ಥಿಕ ಲಾಭ ಗಳಿಸಲು ಮಾತ್ರವಲ್ಲದೆ ಸಮಾಜದಲ್ಲಿ ಎಲ್ಲಾರಿಗೂ ಆರ್ಥಿಕ ಸಹಕಾರ ನೀಡುತ್ತಾ, ಸಮಾಜದಲ್ಲಿ ನೊಂದವರಿಗೆ ನೆರವಾಗುವ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರಾಮಣಿಕತೆ, ಪಾರದರ್ಶಕತೆ ಇದ್ದರೆ ಸಹಕಾರಿ ಸಂಘಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎನ್ನುವುದಕ್ಕೆ ಸವಿತಾ ಸೌಹಾರ್ದ ಸಹಕಾರಿ ಸಂಘ ಉದಾಹರಣೆ ಎಂದರು.
ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ
ಪುತ್ತೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಮೇಶ್ ಮುರ, ಪುತ್ತೂರು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಗಿರೀಶ್ ಕುಮಾರ್, ಶ್ರೀಮಾ ಪಾರ್ಲರ್ನ ಮಾಧವಿ ಮನೋಹರ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಸುರೇಶ್ ನಂದೊಟ್ಟು, ನಿರ್ದೇಶಕರಾದ ಆನಂದ ಭಂಡಾರಿ ಗುಂಡದಡೆ, ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ್ ಭಂಡಾರಿ, ಬುಝಂಗ ಸಾಲಿಯಾನ್, ಪದ್ಮನಾಭ ಭಂಡಾರಿ, ಎಸ್. ರವಿ., ಆಶಾ ಕಂದಾವರ, ಸುಮಲತಾ ಸುರೇಂದ್ರ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶನ್ ಸರಪಾಡಿ ಸ್ವಾಗತಿಸಿದರು, ಸಂಘದ ನಿರ್ದೇಶಕ ದಿನೇಶ್ ಎಲ್ ಬಂಗೇರ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಸಂತ ಎಂ. ಬೆಳ್ಳೂರು ವಂದಿಸಿದರು.