ಬಂಟ್ಚಾಳ:: ಮಂಗಳೂರು ಶಾಸಕ, ವಿಧಾನಸಭೆಯ ನೂತನ ಸಭಾಪತಿ ಯು.ಟಿ.ಖಾದರ್ ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಸ್ಪೀಕರ್ ಹುದ್ದೆಗೆ ಖಾದರ್ ಸೂಕ್ತ ವ್ಯಕ್ತಿಯಾಗಿದ್ದು, ಅವರ ಭಾಷಣವನ್ನು ಪೂರ್ತಿ ಕೇಳಿದ್ದೇನೆ. ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಪೂಜಾರಿ ಬೆನ್ನು ತಟ್ಟಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ಜನಾರ್ದನ ಪೂಜಾರಿ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು, ಹಿರಿಯರಾದ ವೈಕುಂಠ ಬಾಳಿಗಾ ಮತ್ತು ಕೆ.ಎಸ್.ಹೆಗ್ಡೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿಕೊಂಡು ಜಿಲ್ಲೆಯ ಹಾಗೂ ಕ್ಷೇತ್ರದ ಮತದಾರರ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
Advertisement
ಪ್ರಮುಖರಾದ ಈಶ್ವರ್ ಉಳ್ಳಾಲ್, ಮಹಮದ್ ಮೋನು ,ಸದಾಶಿವ ಉಳ್ಳಾಲ್, ದೀಪಕ್ ಪಿಲಾರ್ , ಹಾಶೀರ್ ಪೆರಿಮಾರ್,ದಿನೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
Advertisement