ಬಂಟ್ವಾಳ: ಇಲ್ಲಿನ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 13ನೇ ಪೆರ್ನೆ ಶಾಖೆಯ ಉದ್ಘಾಟನಾ ಸಮಾರಂಭ ಪೆರ್ನೆಯ ಚಂದ್ರ ಆರ್ಕೆಡ್ ನಲ್ಲಿ ಶುಭಾರಂಭ ಗೊಂಡಿತು.
ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆ ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಕ್ಷೇತ್ರವು ಜನರಿಗೆ ಸಹಾಯ ಮಾಡಲು ವಿಪುಲವಾದ ಅವಕಾಶವಿರುವ ಕ್ಷೇತ್ರವಾಗಿದೆ ಎಂದರು. ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದ್ದರು ಕೂಡ ಹೆಚ್ಚು ಸಾಧನೆ ಮಾಡಿದ ಸಹಕಾರಿ ಸಂಘಗಳು ಇದೆ. ಸಾಲ ಪಡೆದು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡಿದಾಗ ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲಿಸಿ
ಆಶೀರ್ವಚನ ನೀಡಿ ಮತೀಯವಾದ ಬಿಟ್ಟು ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದರು. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಜನರ ಆರ್ಥಿಕ ಸಂಕಷ್ಟಕ್ಕೆ ನೆರವಾಗುತ್ತಿದ್ದು ಸಾಲ ಪಡೆದವರು ಮರುಪಾವತಿಯ ಸಂದರ್ಭವೂ ಪ್ರಾಮಣಿಕರಾಗಿದ್ದಾಗ ಸಹಕಾರಿ ಸಂಸ್ಥೆಗಳು ಹೆಚ್ಚು ಬೆಳೆಯಲು ಸಾಧ್ಯವಿದೆ ಎಂದರು. ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರಿಗೆ ಆರ್ಥಿಕ ಸಹಕಾರದ ಜೊತೆಗೆ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಒದಗಿಸುವುದು ನಮ್ಮ ಸಂಘ ಸ್ಥಾಪನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಘ ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಗಿರುವುದು ಹೆಮ್ಮೆಯ ಸಂಗತಿ. ಈ ಬಾರಿ
92.62 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಪೆರ್ನೆ ಗ್ರಾ.ಪಂ. ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೋ ಕಂಪ್ಯೂಟರ್ ಉದ್ಘಾಟಿಸಿದರು.
ಧವಳ ಕೋ. ಅಪರೇಟಿವ್ ಸೊಸೈಟಿ ಅಧ್ಯಕ್ಷ ಸುದರ್ಶನ್ ಜೈನ್ ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಿದರು.
ಕಟ್ಟಡದ ಮಾಲಕ ರಾಜಶೇಖರ ಶೆಟ್ಟಿ ಶೇರು ಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಕೃಷ್ಣ ನಾಯ್ಕ್, ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ಪದಬರಿ, ಕೊರತಿಕಟ್ಟೆ ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನ ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನ ಕೋಡಿ, ಗ್ರಾ.ಪಂ. ಸದಸ್ಯ,
ಮುತ್ತಪ್ಪ ಸಾಲ್ಯಾನ್ ಹನುಮಾಜೆ, ಕಳೆಂಜ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ
ರೋಹಿತ್, ನಿವೃತ್ತ ಬ್ಯಾಂಕ್ ಅಧಿಕಾರಿ ಮೋನಪ್ಪ ಗೌಡ ಬಿಳಿಯೂರು
ಪಂಚಾಯತಿ ಸದಸ್ಯರಾದ ಕೇಶವ ಸುವರ್ಣ, ಮೈರ ಪ್ರಕಾಶ್ ನಾಯ್ಕ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್, ನಿರ್ದೇಶಕರಾದ ಸಪ್ನರಾಜ್, ರಾಜೇಶ್ ಬಿ., ಗಜೇಂದ್ರ ಪ್ರಭು, ವಿಜಯ ಕುಮಾರಿ ಇಂದ್ರ, ಹೇಮಂತ್ ಕುಮಾರ್ ಜೈನ್, ರವೀಂದ್ರ, ಸುಧಾಕರ ಸಾಲ್ಯಾನ್, ಶಾಖಾಧಿಕಾರಿ ಸಂದೇಶ್ ಉಪಸ್ಥಿತರಿದ್ದರು.
ನಿರ್ದೇಶಕ ನಾರಾಯಣ ಸಿ. ಪೆರ್ನೆ ಸ್ವಾಗತಿಸಿದರು, ಮೈಕಲ್ ಡಿಕೋಸ್ತಾ ವಂದಿಸಿದರು, ದಿವಾಕರ ದಾಸ್ ಕಾರ್ಯಕ್ರಮ ನಿರೂಪಿಸಿದರು.