ಬಂಟ್ವಾಳ: ತೋಟಗಾರಿಕಾ ಇಲಾಖೆ ಬಂಟ್ವಾಳ ಹಾಗೂ ದ.ಕ. ಜಿಲ್ಲಾ ದಲಿತ ನಾಗರಿಕ ಹಿರಕ್ಷಕ ಯುವ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಉಚಿತ ಜೇನು ತರಬೇತಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಪ್ರಾಯೋಗಿಕ ತರಬೇತಿ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟುವಿನಲ್ಲಿ ನಡೆಯಿತು.
ಜೇನು ತರಬೇತುದಾರ ಲಕ್ಷ್ಮಣ ಗೌಡ ತಮ್ಮ ಮನೆಯ ಆವರಣದಲ್ಲಿ ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ,ದ.ಕ. ಜಿಲ್ಲಾ ದಲಿತ ನಾಗರಿಕ ಹಿರಕ್ಷಕ ಯುವ ವೇದಿಕೆಯ ಸ್ಥಾಪಾಕಾಧ್ಯಕ್ಷ ಹೊನ್ನಪ್ಪ ಕುಂದರ್, ಗೌರವಾಧ್ಯಕ್ಷ ಪಿ. ಕೇಶವ ನಾಯ್ಕ, ಅಧ್ಯಕ್ಷ ಕೆ.ಸತೀಶ್ ಅರಳ, ಉಪಾಧ್ಯಕ್ಷ ರಾಘವೇಂದ್ರ ಸುರುಳಿಮೂಲೆ, ಡಿ. ಗಂಗಾಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ಸೀತರಾಮ ನಾಯ್ಕ, ಪದಾಧಿಕಾರಿಗಳಾದ ಸಂಜೀವ ಜಿ., ಲಕ್ಷ್ಮಣ್ ಚೆಂಡ್ತಿಮಾರ್, ಕೃಷ್ಣಪ್ಪ ಪುದೊಟ್ಟು, ಧನಂಜಯ ನಾಯ್ಕ, ರಾಮದಾಸ ಮೇರಮಜಲು, ತೋಟರಿಗಾರಿಕ ಇಲಾಖೆಯ ಹರೀಶ್ ಉಪಸ್ಥಿತರಿದ್ದರು. ಬುಧವಾರ ಬಿ.ಸಿ.ರೋಡಿನ ಅಂಬೇಡ್ಕರ್ ಸಮುದಾಯಭವನದಲ್ಲಿ ರಾಧಕೃಷ್ಣ ಬೆಟ್ಟಂಪಾಡಿ ತರಬೇತಿ ನೀಡಿದರು