ಬಂಟ್ವಾಳ: ಬಂಟ್ಚಾಳ ತಾಲೂಕಿನ ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ 2010ರಲ್ಲಿ ಆರಂಭಗೊಂಡ ಲೊರೆಟ್ಟೊ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಲ್ ಕೆ.ಜಿ ಯಿಂದ ಹತ್ತನೆ ತರಗತಿಯವರೆಗೆ ಸುಮಾರು 457 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಈ ಶಾಲೆಗೆ ಕೇಂದ್ರಿಯ ಶಿಕ್ಷಣ ಮಂಡಳಿಯ ಮಾನ್ಯತೆಯೂ ಲಭಿಸಿದ್ದು 2024- 25 ನೇ ಸಾಲಿನಿಂದ ಇಲ್ಲಿ ಸಿಬಿಎಸ್ ಸಿ (CBSC) ತರಗತಿಗಳು ಆರಂಭಗೊಂಡಿರುವುದು ಶಾಲೆಯ ಕೀರ್ತಿಯ ಮುಕುಟಕ್ಕಿಟ್ಟ ಗರಿಯಾಗಿದೆ.
ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಸುಸಜ್ಜಿತವಾದ ತರಗತಿ ಕೋಣೆಗಳು, 7 ಡಿಜಿಟಲ್ ತರಗತಿಗಳು, ವ್ಯವಸ್ಥಿತವಾದ ಕಂಪ್ಯೂಟರ್ ಲ್ಯಾಬ್, 4 ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಲಿಫ್ಟ್ ವ್ಯವಸ್ಥೆ, ಪ್ಲೇ ಸ್ಕೂಲ್, ಸ್ಲೂಲ್ ಬಸ್ಸ್, ವಿಶಾಲವಾದ ಆಟದ ಮೈದಾನ ಈ ಶಾಲೆಯ ವಿಶೇಷತೆಯಾಗಿದೆ. ಪರಿಣಿತ ಶಿಕ್ಷಕರ ತಂಡವಿದೆ. ಕಚೇರಿ ಕೆಲಸಗಳಲ್ಲಿ ನುರಿತ ಶಿಕ್ಷಕೇತರ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಅವಕಾಶವನ್ನು ಶಾಲೆಯ ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ.
ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಅಬಾಕಸ್, ಚೆಸ್, ಬ್ರಾಸ್ ಬ್ಯಾಂಡ್, ಕರಾಟೆ ತರಬೇತಿಯನ್ನು ಅನುಭವಿ ಹಾಗೂ ಪರಿಣಿತ ತರಬೇತುದಾರರಿಂದ ನೀಡಲಾಗುತ್ತಿದೆ. ರೆವರೆಂಡ್ ಫಾದರ್ ಫ್ರಾನ್ಸಿಸ್ ಕ್ರಾಸ್ತ ಅವರ ಸಂಚಾಲಕತ್ವದಲ್ಲಿ ವಿದ್ಯಾಸಂಸ್ಥೆಯು ಪ್ರಗತಿಯ ಹೆಜ್ಜೆಯನ್ನಿಡುತ್ತಿದೆ.
ಸಂಸ್ಥೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಜೇಸನ್ ಮೊನಿಸ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ 2010 ರಲ್ಲಿ ಆರಂಭಗೊಂಡ ಈ ವಿದ್ಯಾಸಂಸ್ಥೆಯಿಂದ ಈಗಾಗಲೇ 11 ಬ್ಯಾಚ್ ಗಳು ಶೇ.100 ಫಲಿತಾಂಶದೊಂದಿಗೆ ತೇರ್ಗಡೆಯೊಂದಿ ತೆರಳಿದ್ದು ಅವರ ಮುಂದಿನ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಆರಂಭಗೊಂಡ ಈ ವಿದ್ಯಾಸಂಸ್ಥೆ ಹಂತ ಹಂತವಾಗಿ ಅಭಿವೃದ್ದಿಯನ್ನು ಕಾಣುತ್ತಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ, ಶಿಸ್ತು, ಪ್ರೀತಿ, ಪ್ರಾಮಾಣಿಕತೆ ಮೊದಲಾದ ಮೌಲ್ಯಾಧಾರಿತ ಶಿಕ್ಷಣವನನ್ನು ನಮ್ಮಸಂಸ್ಥೆ ನೀಡುತ್ತಿದೆ ಎಂದರು.
ಕರಾಟೆಯಲ್ಲಿ ಸಾಧನೆ:
ಲೊರೆಟ್ಟೊ ಆಂಗ್ಲಮಾಧ್ಯಮ ಪ್ರೌಢಶಾಲೆ ಕರಾಟೆಯಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಿದೆ. ಯಮಾಟೋ ಶೋಟೋಕಾನ್ ಕರಾಟೆ ತರಬೇತುದಾರರಾದ ಸೆನ್ಸಾಯಿ ಜೆರಾಲ್ಡ್ ಫೆರ್ನಾಂಡೀಸ್ ಪೆದಮಲೆ ಅವರಿಂದ ಇಲ್ಲಿನ ವಿದ್ಯಾರ್ಥಿಗಳು ಕರಾಟೆ ತರಬೇತಿಯನ್ನು ಪಡೆಯುತ್ತಿದ್ದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ 39 ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ತಂಡ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ 9 ನೇ ತರಗತಿ ವಿದ್ಯಾರ್ಥಿ ಚಿನ್ಮಯಿ ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವುದು ವಿದ್ಯಾ ಸಂಸ್ಥೆಗೆ ಹೆಮ್ಮೆ ತಂದಿದೆ. ಶಾಲೆಯ ಹೆಚ್ಚಿನ ಮಾಹಿತಿಗಾಗಿ www.lorettocentralschool.com ಅನ್ನು ಲಾಗಿನ್ ಮಾಡಬಹುದಾಗಿದೆ.
…..