
ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತಿ ಮಟ್ಟದ ಅರುಂಧತಿ ಸಂಜೀವಿನಿ ಒಕ್ಕೂಟ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಆಶ್ರಯದಲ್ಲಿ ಒಕ್ಕೂಟದ ೨೫ ಸದಸ್ಯರಿಗೆ ನೀಡಲಾದ ತರಬೇತಿಯ ಸಮಾರೋಪ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ವಿದ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನರಿಕೊಂಬು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣನಾಯ್ಕ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಸಂಪನ್ಮೂಲ ವ್ಯಕ್ತಿ ಅಂಜನಾ ಪ್ರಭಾಕರ್, ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಕುಸುಮ ಹಾಗೂ ಕಸೂತಿ ತರಬೇತಿ ಪಡೆದ 25 ಮಂದಿ ಸದಸ್ಯರು ಉಪಸ್ಥಿತರಿದ್ದರು.
ಅಶ್ವಿನಿ ಸ್ವಾಗತಿಸಿದರು. ತನುಜಾ ವಂದಿಸಿದರು. ಅನಿತಾ ನಿರೂಪಿಸಿದರು
ತರಬೇತಿ ಪಡೆದ ಸದಸ್ಯರು ತಾವು ಸಿದ್ದಪಡಿಸಿದ ಉಡುಪುಗಳ ಪ್ರದರ್ಶನವನ್ನು ಏರ್ಪಡಿಸಿದರು.


Advertisement







