
ಬಂಟ್ವಾಳ: ಮುಂಬೈ ಉದ್ಯಮಿ ಸುನೀಲ್ ರಾಜು ಕೋಟ್ಯಾನ್ ಹಾಗೂ ಅವರ ಸಹಧರ್ಮಿಣಿ ದೇವಕಿ ಸುನೀಲ್ ಅವರ 26 ನೇ ವಿವಾಹ ವಾರ್ಷಿಕೋತ್ಸವವನ್ನು ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿರುವ ಭಾರತ್ ಸೇವಾಶ್ರಮದಲ್ಲಿ ಸರಳವಾಗಿ ಆಚರಿಸಲಾಯಿತು.


ಸೇವಾಶ್ರಮದಲ್ಲಿರುವ ಶಿರ್ಡಿ ಸಾಯಿ ಮಂದಿರದಲ್ಲಿ ವಿಶೇಷ ಪೋಜೆ ಸಲ್ಲಿಸಿ, ಬಳಿಕ ಅಲ್ಲಿನ ಗೋಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿ ಸೇವಾಶ್ರಮದಲ್ಲಿರುವ ಅನಾಥ ವೃದ್ದರು, ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.


ಈ ಸಂದರ್ಭ ಸೇವಾಶ್ರಮದ ಕಾರ್ಯದರ್ಶಿ ಈಶ್ವರ್ ಭಟ್ ಅವರು ಜೊತೆಗಿದ್ದು ಆಶ್ರಮ ನಿರ್ಮಾಣ ಹಾಗೂ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿಕೊಟ್ಟರು. ಸೇವಾಶ್ರಮದ ಮೂರು ಆಶ್ರಮಕ್ಕೂ ಭೇಟಿ ನೀಡಿ ಅಲ್ಲಿನ ವೃದ್ಧರು, ನಿರ್ಗತಿಕರು, ಮಕ್ಕಳೊಂದಿಗೆ ಬೆರೆತು ಸಹಭೋಜನ ನಡೆಸಿದರು. ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ದಂಪತಿಗೆ ಹಿರಿಯರು ಮನಪೂರ್ವಕವಾಗಿ ಶುಭ ಹಾರೈಸಿದರು. ಈ ಮೂಲಕ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾದರು.


ಈ ಸಂದರ್ಭ ಪ್ರಮುಖರಾದ ತಿಮ್ಮಪ್ಪ ಕುಲಾಲ್ ಮಣ್ಣಗುಡ್ಡೆ, ಸುರೇಶ್ ಕುಲಾಲ್ ಮಂಗಳೂರು, ಮುಂಬೈ ಉದ್ಯಮಿ ಉಮೇಶ್ ಕುಲಾಲ್, ನಾರಾಯಣ ಸಿ. ಪೆರ್ನೆ, ಭಾಸ್ಕರ್ ಕೊಳ್ನಾಡು ಉಪಸ್ಥಿತರಿದ್ದರು.


Advertisement







