
ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇಲ್ಲಿಗೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ರೋಟರಿ ಸಭಾಭವನ ಗ್ರೀನ್ ಸಿಟಿ ಲೊರೆಟ್ಟೊ ಹಿಲ್ಸ್ ನಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅದ್ಭುತವಾದ ಸಾರ್ವಜನಿಕ ಉಪಯೋಗದ ಸೇವಾ ಕಾರ್ಯಕ್ರಮವನ್ನು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಡಿದೆ ಎಂದರು. ಕ್ಲಬ್ ಮಾಡುವ ಸೇವಾ ಯೋಜನೆಗಳ ಎಲ್ಲಾ ಡೇಟಾಗಳು ನಮ್ಮಲ್ಲಿ ಅಗತ್ಯವಾಗಿ ಬೇಕಾಗಿದ್ದು ಅದಕ್ಕಾಗಿ ಸ್ವಂತ ವೆಬ್ ಸೈಟ್ ಆರಂಭಿಸುವಂತೆ ತಿಳಿಸಿದರು. ಇದರಿಂದ ನಾವೇನು ಮಾಡುತ್ತಿದ್ದೇವೆ ಎನ್ನುವುದು ಜನರಿಗೆ ತಿಳಿಯಲು ಸಾಧ್ಯವಿದೆ ಎಂದರು.


ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಮಾತನಾಡಿ ರೋಟರಿ ಸಂಸ್ಥೆಯ ಟಿಆರ್ ಎಫ್ ಗೆ ನೀಡುವ ದೇಣಿಗೆ ಸಮಾಜದ ಅರ್ಹ ವ್ಯಕ್ತಿಗಳಿಗೆ ತಲುಪುತ್ತದೆ ಎಂದರು.
ಸಹಾಯಕ ಗವರ್ನರ್ ಸಿ.ಎ. ಉಮೇಶ್ ರಾವ್ ಮಿಜಾರ್ ಮಾತನಾಡಿ ರೋಟರಿ ಸಂಸ್ಥೆಯ ಟಿಆರ್ ಎಫ್ ಗೆ ದೇಣಿಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇಂತಹ ಸಂಸ್ಥೆಯ ಸದಸ್ಯರಾಗಿರುವುದು ಹೆಮ್ಮೆ ವಿಚಾರ ಎಂದರು.



ಸೇವಾ ಕಾರ್ಯಕ್ರಮದ ಅಂಗವಾಗಿ ಆರ್ಥಿಕ ನೆರವು ಹಾಗೂ ವೀಲ್ ಚೆಯರ್ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಅಂಧರ ವಸತಿ ಯೋಜನೆಗೆ 1ಲಕ್ಷ ರೂ. ದೇಣಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಕಾಶ್ ಕಾರಂತ್ ಹಾಗೂ ರಾಮಕೃಷ್ಣ ಪಿ.ಕೆ. ಅವರನ್ನು ಸನ್ಮಾನಿಸಲಾಯಿತು.
ಜೋನಲ್ ಲೆಫ್ಟಿನೆಂಟ್ ರಾಮಚಂದ್ರ ಶೆಟ್ಟಿಗಾರ್,
ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನಿಯೋಜಿತ ಅಧ್ಯಕ್ಷೆ ಗೀತಾ ಬಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಸ್ವಾಗತಿಸಿದರು.
ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ವರದಿ ವಾಚಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
Advertisement







