ಬಂಟ್ವಾಳ: ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ತುಂಬೆ ಇಲ್ಲಿ ಪ್ರಥಮ ವರ್ಷದ ಅನಸ್ತೇಷಿಯಾ ಆಪರೇಷನ್ ಥಿಯೇಟರ್ ಟೆಕ್ನೋಲಜಿ (ಬಿ ಎಸ್ಸಿ ಎಟಿ- ಓಟಿ ) ಇದರ ಉದ್ಘಾಟನಾ ಸಮಾರಂಭ ಕಾಲೇಜಿನ ಪ್ಲೋರೆನ್ಸ್ ನೈಟಿಂಗೇಲ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ ನ ನಿರ್ದೇಶಕ ರೆವರೆಂಡ್ ಫಾದರ್ ರಿಚಾರ್ಡ್ ಎ. ಕುವೆಲ್ಯೋ ಉದ್ಘಾಟಿಸಿದರು. ಅವರು ಮಾತನಾಡಿ ಫಾದರ್ ಮುಲ್ಲರ್ ಕಾಲೇಜ್ ಆಫ್ ಎಲೈಡ್ ಹೆಲ್ತ್ ಸೈನ್ಸ್ ಮೂಲಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅನೇಕ ಅವಕಾಶಗಳನ್ನು ಒದಗಿಸಿಕೊಡಲಾಗುತ್ತಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು.
ಫಾದರ್ ಮುಲ್ಲರ್ ಕಾಲೇಜ್ ಆಫ್ ಎಲೈಡ್ ಹೆಲ್ತ್ ಸೈನ್ಸ್ ಮಂಗಳೂರು ಇಲ್ಲಿನ ಪ್ರಾಂಶುಪಾಲೆ ಡಾ. ಹಿಲ್ಡಾ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಸ್ಥೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಹೊಸ ಕೋರ್ಸ್ ಗಳನ್ನು ಪರಿಚಯಿಸುತ್ತಿದ್ದು
ಮುಂದಿನ ದಿನಗಳಲ್ಲಿ ಇದನ್ನು ಅಭ್ಯಸುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು. ಕಠಿಣ ಪರಿಶ್ರಮ ಇಲ್ಲದೆ ಯಶಸ್ಸು ಸಿಗುವುದಿಲ್ಲ. 4 ವರ್ಷ ನಿಮ್ಮವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಅದು ಯಶಸ್ಸಿನ ಫಲ ನೀಡಲಿದೆ ಎಂದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಕಿರಣ್ ಶೆಟ್ಟಿ, ತುಂಬೆ ಫಾದರ್ ಮುಲ್ಲರ್ ಹೆಲ್ಸ್ ಸೈನ್ಸ್ ಕಾಲೇಜಿನ ನೂತನ ಪ್ರಾಂಶುಪಾಲ ಡಾ. ಶಿವಶಂಕರ್ ಎ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ರೆವರೆಂಡ್ ಫಾದರ್ ಸಿಲ್ವೆಸ್ಟರ್ ವಿ. ಲೋಬೋ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ದಿವ್ಯ ವಿನ್ಸೆಂಟ್ ವಂದಿಸಿದರು, ಡಾ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.