
ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್ ಬಂಟ್ವಾಳಕ್ಕೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಭಾನುವಾರ ಸಂಜೆ ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಮೂಲಕ ಇಂದು ಅನೇಕ ಸೇವಾ ಕಾರ್ಯಕ್ರಮಗಳು ನಡೆಯುತ್ತಿದೆ. ರೋಟರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡಲು ಅವಕಾಶವಿದೆ. ಬಂಟ್ವಾಳ ರೋಟರಿ ಕ್ಲಬ್ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ, ಶಾಶ್ವತ ಕೊಡುಗೆಗಳನ್ನು ನೀಡಿ ಜಿಲ್ಲೆಯ ರೋಟರಿ ಕ್ಲಬ್ ಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಾಯಕ ಗವರ್ನರ್ ಡಾ. ಎ. ಜಯಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಸೇವಾ ಪ್ರಯಾಣವನ್ನು ಪುನರ್ ಪರಿಶೀಲನೆ ಮಾಡಲು, ನಮ್ಮಚಟುವಟಿಕೆಗಳನ್ನು ಪುನರ್ ಸಂಯೋಜಿಸಲು, ಹೊಸ ಉತ್ಸಾಹದಿಂದ ಕೆಲಸ ಮಾಡಲು ಗವರ್ನರ್ ಅಧಿಕೃತ ಬೇಟಿ ಕಾರ್ಯಕ್ರಮದಿಂದ ಸಾಧ್ಯವಿದೆ ಎಂದರು. ಬಂಟ್ವಾಳ ರೋಟರಿ ಕ್ಲಬ್ ಹೃದಯವಂತಿಕೆಯಲ್ಲೂ ದೊಡ್ಡ ಕ್ಲಬ್, ಸೇವಾ ಕಾರ್ಯಗಳ ಪೈಕಿ _ಟಾಪ್ 10 ಕ್ಲಬ್ ಗಳಲ್ಲಿ ಬಂಟ್ಚಾಳ ಕ್ಲಬ್ ಇದೆ ಎಂದು ಅಭಿನಂದಿಸಿದರು.

ವಲಯ ಸೇನಾನಿ ಪ್ರಕಾಶ್ ಬಾಳಿಗ ಮಾತನಾಡಿ 57 ವರ್ಷಗಳ ಬಂಟ್ವಾಳ ಕ್ಲಬ್ ಈವರೆಗೆ ಒಟ್ಟು 2.25 ಲಕ್ಷ ಡಾಲರ್ ದೇಣಿಗೆಯನ್ನು ರೋಟರಿ ಸಂಸ್ಥೆಗೆ ನೀಡಿದೆ ಎಂದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಕ್ಲಬ್ ನ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷ ಬೇಬಿ ಕುಂದರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಸದಸ್ಯೆ ಗೌರಿ ಮಾಧವ ಶೈಣೈ ಅವರನ್ನು ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಸೇವಾ ಕಾರ್ಯದ ಅಂಗವಾಗಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಟೈಲರಿಂಗ್ ಯಂತ್ರ, ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಗೆ ಕಪಾಟು ಕೊಡುಗೆಯಾಗಿ ನೀಡಲಾಯಿತು. ಸಾಧಕರಾದ ಡಾ.ದೇವರಾಜ ಅರಸು ವಸತಿ ನಿಲಯದ ನಿಲಯ ಪಾಲಕಿ ಭವಾನಿ ಹಾಗೂ ದಸರಾ ವೇಷಧಾರಿ ದೇವದಾಸ್ ನಾಯ್ಕ್ ಅವರನ್ನು ಗೌರವಿಸಲಾಯಿತು.

ವಿವಿಧ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಹಾಗೂ ಆಡಳಿತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ರಮೇಶಾನಂದ ಸೋಮಯಾಜಿ, ಪ್ರಕಾಶ್ ಕಾರಂತ್, ಡಾ. ಸತ್ಯಶಂಕರ್ ಶೆಟ್ಟಿ, ವಿರೇಂದ್ರ ಅಮೀನ್, ಮೆಸ್ಕಾಂ ಸಲಹಾ ಸಮಿತಿಗೆ ಆಯ್ಕೆಯಾದ ಸ್ಟೀವನ್ ಡಿಸೋಜಾ ಅವರನ್ನು ಅಭಿನಂದಿಸಲಾಯಿತು.


ಈ ಸಂದರ್ಭ ಟಿಆರ್ ಎಫ್ ದೇಣಿಗೆಯನ್ನು ಪ್ರಕಾಶ್ ಕಾರಂತ್ ಗವರ್ನರ್ ಗೆ ಹಸ್ತಾಂತರಿಸಿದರು. ಬಳಿಕ ನಿಯೋಜಿತ ಅಧ್ಯಕ್ಷ ರವಿ ಬಂಟ್ವಾಳ ಹಾಗೂ ಗವರ್ನರ್ ಅವರನ್ನು ಗೌರವಿಸಲಾಯಿತು. ಕ್ಲಬ್ ಕಾರ್ಯದರ್ಶಿ
ಮಹಮ್ಮದ್ ಯಾಸೀರ್ ಕಲ್ಲಡ್ಕ ವರದಿ ವಾಚಿಸಿ, ವಂದಿಸಿದರು.

Advertisement







