ಬಂಟ್ವಾಳ: ಅಭಿರುಚಿ ಜೋಡುಮಾರ್ಗ ಮತ್ತು ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ) ಮಂಚಿ ಸಹಯೋಗದಲ್ಲಿ ನಟಮಿತ್ರರು ಹವ್ಯಾಸಿ ಕಲಾಸಂಘ (ರಿ.) ತೀರ್ಥಹಳ್ಳಿ ಅಭಿನಯಿಸುವ ಆ ಊರು ಈ ಊರು ನಾಟಕ ಫೆ.೧೫ರಂದು ಭಾನುವಾರ ಬಂಟ್ವಾಳ ಸ್ಪರ್ಶಾ ಕಲಾಮಂದಿರದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ ಎಂದು ಅಭಿರುಚಿ ಅಧ್ಯಕ್ಷ ದಾಮೋದರ ರಾಮಕುಂಜ ತಿಳಿಸಿದ್ದಾರೆ.
ದೆಹಲಿಯ ಭಾರತ್ ರಂಗಮಹೋತ್ಸವಕ್ಕೆ ಆಯ್ಕೆಯಾಗಿರುವ ಈ ನಾಟಕವನ್ನು ಜಿ. ಬಿ. ಜೋಷಿ ರಚಿಸಿದ್ದು, ಪ್ರಸಿದ್ಧ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿ ನಿರ್ದೇಶಿಸಿದ್ದಾರೆ.


Advertisement








