
ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮಣಿ ಹಳ್ಳ ಇದರ ಹಿರಿಯ ಕಾರ್ಯಕರ್ತ ಸದಾನಂದ ಕುಲಾಲ್ ಅವರ ಮನೆಗೆ ಏಕಲವ್ಯ ಶಾಖೆಯ ನೇತೃತ್ವದಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ, ಅಧ್ಯಕ್ಷ ಯಶೋಧರ ಚೌಟ, ಉದ್ಯಮಿ ರವಿಚಂದ್ರ ಬಂಟ್ವಾಳ, ಬಂಟ್ವಾಳ ತಾಲೂಕು ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ, ಏಕಲವ್ಯ ಶಾಖೆ ಅಧ್ಯಕ್ಷ ತಾರಾನಾಥ ಗೌಡ, ಕಾರ್ಯದರ್ಶಿ, ಮಾಜಿ ಅಧ್ಯಕ್ಷ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಲೋಕನಾಥ್, ರಿಕ್ಷಾ ಚಾಲಕರಾದ ರವಿಕುಮಾರ್ ಶ್ರೀನಿವಾಸ್, ಗಣೇಶ ಇದ್ದರು. ಈ ಸಂದರ್ಭದಲ್ಲಿ ಕೇಬಲ್ ಮಾಸಿಕ ಕಂತನ್ನು ಉಚಿತವಾಗಿ ನೀಡುವ ಭರವಸೆಯನ್ನು ರವಿಚಂದ್ರ ಬಂಟ್ವಾಳ ನೀಡಿದರು.

Advertisement
Advertisement








