
ಬಂಟ್ವಾಳ: ಇಲ್ಲಿಯ ನಗರದ ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನ ದ ಪುನರ್ ಕಲಶಾಭಿಷೇಕ ಹಾಗೂ ಕಾಲಾವಧಿ ನೇಮೋತ್ಸವವು ಮಾ.30ರಿಂದ ಎ. 3 ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.30 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ದಿಕ್ಪಾಲಕ ಬಲಿ
ಮಾ. 31 ಬೆಳಿಗ್ಗೆ 6 ಕ್ಕೆ ಗಣಹೋಮ, ಶ್ರೀ ನಾಗದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ನಾಗತಂಬಿಲ (ಸರ್ಪತ್ರಯ ಹೋಮ)ಸಂಜೆ 6 ಕ್ಕೆ ಶ್ರೀ ಕ್ಷೇತ್ರದ ಧರ್ಮ ದೈವಗಳಿಗೆ ಕಲಶಾಧಿವಾಸ, ಅಧಿವಾಸ ಹೋಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎ.1ರಂದು ಬೆಳಿಗ್ಗೆ 6 ಕ್ಕೆ ಗಣಹೋಮ, ಕಲಶ ಪ್ರತಿಷ್ಠೆ, ಪ್ರಧಾನ ಹೋಮ, ಶ್ರೀ ದೈವಗಳಿಗೆ ಪುನರ್ ಕಲಶಾಭಿಷೇಕ, ನಾಗದೇವರಿಗೆ ತಂಬಿಲ ಸೇವೆ,ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30ಕ್ಕೆ ಅನ್ನಸಂತರ್ಪಣೆ, ಸಂಜೆ 7 ರಿಂದ 8.30 ರವರೆಗೆ ಭಜನಾ ಸಂಕೀರ್ತನೆ, ರಾತ್ರಿ 10 ಕ್ಕೆ
ಶ್ರೀ ಅರಸು ದೈವದ ನೇಮೋತ್ಸವ ಎ.2 ರಂದು ಸಂಜೆ 7 ರಿಂದ ರಾತ್ರಿ 8.30ರ ವರೆಗೆ ಭಜನಾ ಸಂಕೀರ್ತನೆ 9 ಕ್ಕೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ, ಎ. 3 ರಂದು ಸಂಜೆ ಗಂಟೆ 6ರಿಂದ 7.30ರ ವರೆಗೆ ಭಜನಾ ಸಂಕೀರ್ತನೆ, ರಾತ್ರಿ10 ಕ್ಕೆ
ಶ್ರೀ ವೈದ್ಯನಾಥ ದೈವದ ನೇಮೋತ್ಸವ, ಕಂಚಿಲ ಸೇವೆ ಹಾಗೂ ಶ್ರೀ ವೈದ್ಯನಾಥ ದೈವದ ಪೇಟೆ ಸವಾರಿ ಬಂಡಿ ಉತ್ಸವ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Advertisement







