ಬಂಟ್ವಾಳ: ಸರಕಾರಿ ಜಾಗದಲ್ಲಿ ಅಕ್ರಮ ವಾಸ್ತವ್ಯ ಹೊಂದಿರುವವರಿಗೆ ೯೪ಸಿ ಅರ್ಜಿ ಸ್ವೀಕಾರಿಸಲು ಅಧಿಕಾರಿಗಳಿಗೆ ಆದೇಶ ನೀಡುವಂತೆ ಕಂದಾಯ ಸಚಿವರಿಗೆ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಪತ್ರ ಬರೆದಿದ್ದಾರೆ.
ಕರಾವಳಿ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಭೂಮಿ ಹಾಗೂ ಕುಮ್ಕಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯ ಇರುವವರು ಹಕ್ಕು ಪತ್ರ ಪಡೆಯಲು ೯೪ಸಿ ಅಡಿಯಲ್ಲಿ ಅರ್ಜಿ ನೀಡಲು ಸಾಧ್ಯವಾಗದೇ ಕೆಲವು ಕುಟುಂಬಗಳು ಬಾಕಿ ಉಳಿದಿವೆ. ಇಂತಹ ಕುಟುಂಬಗಳಿಗೆ ಮನೆ ನಂಬರ್ ಇಲ್ಲದೆ ಸರಕಾರದ ವಿವಿಧ ಯೋಜನೆಗಳಿಗೆ ಅವಶ್ಯಕವಾಗಿ ಪಡೆಯುವ ಪಡಿತರ ಚೀಟಿ,ವಸತಿ ಯೋಜನೆ,ವಿವಿಧ ಪಿಂಚಣಿ ಸೇರಿದಂತೆ ಹಲವು ಯೋಜನೆಗಳಿಂದ ವಂಚಿತರಾಗಿದ್ದಾರೆ.
ಆದುದರಿಂದ ಸರಕಾರಿ ಭೂಮಿ ಹಾಗೂ ಕುಮ್ಕಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ್ತವ್ಯ ಇರುವವರಿಗೆ ಹಕ್ಕು ಪತ್ರ ನೀಡುವಂತಾಗಲು ೯೪ಸಿ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.