ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ 28ನೇ ವಾರ್ಷಿಕ ಸಹಮಿಲನ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿದ ಡಾ. ಎನ್. ನರಸಿಂಹ ಹೊಳ್ಳ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಿತು.
ನಾಗರಿಕ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಎನ್. ನರಸಿಂಹರಾಜ್ ಹೊಳ್ಳ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಪ್ರೊ ಶಂಕರ್ ಭಟ್ ದೀಪ ಪ್ರಜ್ವಲಿಸಿ ಮಾತನಾಡಿ
ಸ್ಥಾಪಕಾಧ್ಯಕ್ಷ ಪ್ರೊ ಶಂಕರ್ ಭಟ್ ದೀಪ ಪ್ರಜ್ವಲಿಸಿ ಮಾತನಾಡಿ ಯಾವುದೋ ಊರಿನವರು, ಯಾವುದೋ ಉದ್ಯೋಗದವರು ಈ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಈ ಪ್ರದೇಶ ಸಂಚಯಗಿರಿ ಯಾಯಿತು. ಒಂದು ಮುಖ್ಯ ರಸ್ತೆ ಇದ್ದ ಈ ಪ್ರದೇಶದಲ್ಲಿ ಇಂದು 4 ಮುಖ್ಯ ರಸ್ತೆ, ಉಪರಸ್ತೆಗಳು ನಿರ್ಮಾಣಗೊಂಡಿತು. ಸಂಚಯಗಿರಿಯಲ್ಲಿ ವಾಸಿಸಲು ಪುಣ್ಯ ಬೇಕು. ನಾವು ಅನಿವಾರ್ಯವಾಗಿ ಬೇರೆ ಊರಿಗೆ ಹೋದರು ನಮ್ಮ ಮೂಲ ಬೇರು ಇಲ್ಲೇ ಇದೆ ಎಂದ ಅವರು ನಾಗರಿಕ ಕ್ರಿಯಾ ಸಮಿತಿಯು ಔನತ್ಯಕ್ಕೆ ಬೆಳೆಯುತ್ತಿರಲಿ ಎಂದು ಶುಭ ಹಾರೈಸಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಮಾತನಾಡಿ ಸಂಘ ನೀತಿ, ದೈವ ಪ್ರೀತಿ, ಪಾಪ ಭೀತಿ ಇದ್ದಾಗ ಯೋಗ್ಯ ಸಮಾಜ ನಿರ್ಮಾಣವಾಗುತ್ತದೆ. ಈ ಮೂರು ವಿಚಾರ ಸಂಚಯಗಿರಿಯ ನಾಗರಿಕರಲ್ಲಿ ಇದೆ. ಜಗತ್ತಿನ ಮೂಲೆ ಮೂಲೆಗಳಿಂದ ಇಂದು ಅಧ್ಯಯನಕ್ಕಾಗಿ ಸಂಚಯಗಿರಿಗೆ ಬರುತ್ತಿದ್ದಾರೆ ಇದು ಸಂಚಯಗಿರಿಗೆ ಸಂದ ಗೌರವ ಎಂದರು.
ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಮಿತಿಯ ಗೌರವಾಧ್ಯಕ್ಷ ಎನ್. ನರಸಿಂಹರಾಜ್ ಹೊಳ್ಳ ಹಾಗೂ ನಯನ ಹೊಳ್ಳ ದಂಪತಿಯನ್ನು ಗೌರವಿಸಲಾಯಿತು.
ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 9 ಮಂದಿ ಪೂರ್ವಾಧ್ಯಕ್ಷರನ್ನು ಗೌರವಿಸಲಾಯಿತು
ಮುಖ್ಯ ಅತಿಥಿಯಾಗಿ ಸ್ಥಾಪಕ ಕಾರ್ಯದರ್ಶಿ ಪ್ರೊ.ವೃಷಭ ರಾಜ್, ಪುರಸಭೆ ಸದಸ್ಯೆ ಜಯಂತಿ ವಸಂತ, ಉದ್ಯಮಿ ರಘು, ನಾರಾಯಣ ರಾವ್, ಉಪಾಧ್ಯಕ್ಷೆ ಪ್ರಿಯಲತಾ, ರಕ್ಷಿತ್ ಹೊಳ್ಳ, ಕ್ರೀಡಾ ಕಾರ್ಯದರ್ಶಿ ಪುರಂದರ ಉಪಸ್ಥಿತರಿದ್ದರು. ಉಪನ್ಯಾಸಕಿ ಅಕ್ಷತಾ ಅಜಯ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಪಾಂಡುರಂಗ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು. ಆಶಾಲತ ಪತಿಭಾ ಪುರಸ್ಕೃತರ ಪರಿಚಯ ಮಾಡಿದರು. ದಾಮೋದರ ಎ. ವಂದಿಸಿದರು. ಸತೀಶ್ ಸಂಚಯಗಿರಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಸಾಲ್ಯಾನ್ ಸಹಕರಿಸಿದರು.