Author: admin
ಬಂಟ್ವಾಳ: ನೇಪಾಲದಲ್ಲಿ ಪಿಸಿಎ ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ಇಂಡೋ-ನೇಪಾಲ್ ಇಂಟರ್‌ನ್ಯಾಷನಲ್ ಇನ್ವಿಟೇಶನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ತ್ರೋಬಾಲ್ ಪಂದ್ಯಾಟದಲ್ಲಿ ಭಾರತ ಚಾಂಪಿಯನ್ ಪ್ರಶಸ್ತಿ ಪಡೆದಿದ್ದು, ತಂಡದಲ್ಲಿ ಭಾಗವಹಿಸಿದ್ದ ಬಂಟ್ವಾಳ ಚಂಡ್ತಿಮಾರಿನ ಸುಪ್ರಿಯಾ ಎಸ್.ಪಿ. ಅವರು ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದಿದ್ದಾರೆ. ಅವರು ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಜತೆಗೆ ಪುರುಷರ ತಂಡವನ್ನು ಚಂಡ್ತಿಮಾರಿನ ಪ್ರಜ್ವಲ್ ಎಸ್.ಪಿ, ರಕ್ಷಿತ್ ಆರ್. ಅವರು ಪ್ರತಿನಿಧಿಸಿದ್ದರು. Advertisement Advertisement Advertisement Advertisement
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿರುವ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು. Advertisement ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಬ್ಯಾಂಕಿಂಗ್ ವ್ಯವಹಾರ ಮಾತ್ರವಲ್ಲಸೆ ಮಾತ್ರವಲ್ಲದೆ ಸಮಾಜದದ ದೀನರಿಗೆ, ಹಿಂದುಳಿದ ವರ್ಗದವರಿಗೆ ನೆರವಾಗುವ ಮೂಲಕ ಮಾದರಿ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದರು. ಪೋಷಕರುಮಕ್ಕಳಿಗೆ ಸಂಪತ್ತು ಮಾಡಿಡುವ ಬದಲು ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಬೇಕು, ಮಕ್ಕಳ ಬಗ್ಗೆ ಪೋಷಕರು ಸದಾ ನಿಗಾ ವಹಿಸಬೇಕು ಎಂದರು. ಪೋಷಕರು ಕಷ್ಟ ಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ನಾಗರಿಕರಾಗಿ ತಂದೆ ತಾಯಿಯ ಕಣ್ಣೀರೊರೆಸುವ ಕೆಲಸವನ್ನು ಮಕ್ಕಳು ಮಾಡಬೇಕು, ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ತನ್ನ ಲಾಭದ ಒಂದು ಅಂಶವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ನೀಡುತ್ತಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಂಡು…
ಬಂಟ್ವಾಳ: ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ಚರ್ಚಿನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವಾದ (ಮೋಂತಿ ಫೆಸ್ತ್) ಭಾನುವಾರ ತೆನೆಹಬ್ಬ ವನ್ನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಂದನೀಯ ಜೇಸನ್ ಮೋನಿಸ್ ಪ್ರಧಾನ ಧರ್ಮಗುರುಗಳಾಗಿ ವಂದನೀಯ ಗ್ಲ್ಯಾಡ್ವಿನ್ ಫೆರ್ನಾಂಡಿಸ್ ಹಾಗೂ ಗುಜರಾತ್ ಧರ್ಮ ಪ್ರಾಂತ್ಯದಲ್ಲಿ ಸೇವೆ ನೀಡುತ್ತಿರುವ ವಂದನೀಯ ಜೇಮ್ಸ್ ವಾಸ್, ವಂದನೀಯ ಜೆರಾಲ್ಡ್ ಪೀಟರ್ ಲೋಬೊ ಬಲಿಪೂಜೆಯನ್ನು ಅರ್ಪಿಸಿದರು. Advertisement Advertisement ಪ್ರಧಾನ ಧರ್ಮಗುರುಗಳು ದೇವರ ವಾಕ್ಯದ ಸಂದೇಶದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ತ್ಯಾಗಮಯ ಜೀವನದ ಬಗ್ಗೆ ಪ್ರವಚನ ನೀಡಿದರು. ಪೂಜೆಯಲ್ಲಿ ಮಕ್ಕಳು, ಭಕ್ತಾದಿಗಳು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು. ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ ಪಾಲ್ಗೊಂಡರು.ಕಳೆದ ೯ ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು. Advertisement ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಭತ್ತದ ತೆನೆಯನ್ನು ನೀಡಿ ಗೌರವಿಸಲಾಯಿತು. ಬಲಿ ಪೂಜೆ ಬಳಿಕ…
ಬಂಟ್ವಾಳ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲೊಂದಾದ ಬಂಟ್ಚಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ವು (ಪಿಎಲ್ ಡಿ ಬ್ಯಾಂಕ್)ಪ್ರಸಕ್ತ ಸಾಲಿನಲ್ಲಿ 1.05 ಕೋ.ರೂ. ಲಾಭಗಳಿಸಿದ್ದು, ಶೆ.11% ಡಿವಿಡೆಂಡ್‌ನ್ನು ಸದಸ್ಯರಿಗೆ ಹಂಚಲು ನಿರ್ಧರಿಸಲಾಗಿದೆ ಎಂದು ಬಿ.ಸಿ.ರೋಡಿನ ಯುವ ನ್ಯಾಯವಾದಿ, ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ತಿಳಿಸಿದ್ದಾರೆ.ಬಿ.ಸಿ.ರೋಡಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,2020 ಫೆ.ತಿಂಗಳಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದಾಗ ನಷ್ಟದಲ್ಲಿದ್ದ ಬ್ಯಾಂಕ್ ಪ್ರಸ್ತುತ ನಿರ್ದೇಶಕರು,ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ನಷ್ಟವನ್ನು ಭರಿಸಿ 2023-24ನೇ ಸಾಲಿನಲ್ಲಿ ಬ್ಯಾಂಕ್1.05 ಕೋ.ರೂ ಲಾಭವನ್ನು ಗಳಿಸಿದ್ದಲ್ಲದೆ ಇದೇ ಮೊದಲಿಗೆ ಸರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿ ಸದಸ್ಯರಿಗೆ ಶೇ.11 ಡಿವಿಡೆಂಡ್ ಹಂಚಲು ಆಡಳಿತ ಮಂಡಳಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಸೆ.14 ರಂದು ನಡೆಯುವ ಬ್ಯಾಂಕಿನ ಮಹಾಸಭೆಯಂದು ಇದನ್ನು ಘೋಷಿಸಲಾಗುವುದು ಎಂದರು. Advertisement Advertisement ತಾಲೂಕಿನ 84 ಗ್ರಾಮಗಳ ವ್ಯಾಪ್ತಿಯ…
ಬಂಟ್ವಾಳ: ತಾಲೂಕಿನ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣಗೋಡೆ ಕುಸಿದು ಬಿದ್ದಿರುವ ಹಿನ್ನಲೆಯ್ಲಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಕಾವಳ ಪಡೂರು ಪಂಚಾಯತಿ ಸದಸ್ಯ ವೀರೇಂದ್ರ ಅಮೀನ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಕರುಣೇಂದ್ರ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರವೀಣ್, ವಿಜಯ ಉಪಸ್ಥಿತರಿದ್ದರು. Advertisement Advertisement Advertisement —
ಬಂಟ್ವಾಳ: ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆ ಆರ್. ಎಸ್. ಫರ್ನಿಚರ್ ಆಂಡ್ ಮಾರ್ಕೆಂಟಿಂಗ್ ಬಂಟ್ವಾಳ ಪೇಟೆಯ ಕಾಲೇಜು ರಸ್ತೆಯಲ್ಲಿರುವ ನವದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. Advertisement ಕಟ್ಟಡದ ಮಾಲಕರಾದ ಬಾಮಿ ಶ್ರೀನಿವಾಸ ಶೆಣೈ ಹಾಗೂ ಶಾಂತೇರಿ ಶ್ರೀನಿವಾಸ ಶೆಣೈ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಸೌತಡ್ಕ ಸ್ಟೀಲ್ಸ್ ಆಂಡ್ ಫರ್ನಿಚರ್ಸ್ ನ ಮಾಲಕರಾದ ನಾಗೇಶ್ ಸಾಲ್ಯಾನ್ ಹಾಗೂ ಪಲ್ಲವಿ ನಾಗೇಶ್ ಈ ಸಂದರ್ಭ ಉಪಸ್ಥಿತರಿದ್ದು ಶುಭ ಹಾರೈಸಿದರು.ಹಲವು ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದ ರಾಜೇಶ್ ಹಾಗೂ ಮಹಮ್ಮದ್ ರಶೀದ್ ತಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸುವ ಯೋಜನೆ ರೂಪಿಸಿದ್ದರು. ಅಂತೆಯೆ ಇದೀಗ ತಮ್ಮ ಕನಸಿನ ಆರ್. ಎಸ್. ಫರ್ನಿಚರ್ ಅಂಡ್ ಮಾರ್ಕೆಟಿಂಗ್ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಉದ್ಯಮಕ್ಕೆ ಚಾಲನೆ ನೀಡಿದ್ದಾರೆ. ಇಲ್ಲಿ ಕಪಾಟು, ಡೈನಿಂಗ್ ಟೇಬಲ್, ಚೆಯರ್, ಟೀಪಾಯಿ, ಬೆಡ್ ಸೇರಿದಂತೆ ಎಲ್ಲಾ ಬಗೆಯ ಗೃಹಪಯೋಗಿ ವಸ್ತುಗಳು ಲಭ್ಯವಿದೆ. ಇವರ ಹಲವು ವರ್ಷಗಳ ಅನುಭವದಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ. ಉದ್ಘಾಟನಾ…
ಬಂಟ್ವಾಳ ತಾಲೂಕಿನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೃಹಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಭದ್ರಾ ಹೋಂ ಅಪ್ಲೈಯೆನ್ಸಸ್ ಪ್ರಥಮ ಶಾಖೆ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬಿ.ಸಿ.ರೋಡಿನಲ್ಲಿ ಗುರುವಾರ ಶುಭಾರಂಭಗೊಂಡಿತು.ಬಿ.ಸಿ.ರೋಡಿನ ಸೋಮಾಯಜಿ ಹೌಸ್ ನಲ್ಲಿ ಸಂಸ್ಥೆಯ ಮೊದಲ ಶಾಖೆಯನ್ನು ಭದ್ರಾ ಸಮೂಹ ಸಂಸ್ಥೆಗಳ ಪ್ರವರ್ತಕ ಮಂಜುನಾಥ ಆಚಾರ್ಯ ಅವರ ಮಾತೃಶ್ರೀ ಆಶಾಲತಾ ಬಾಯಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರು ವೀರ ವೆಂಕಟೇಶ ದೇವಸ್ಥಾನದ ತಂತ್ರಿಗಳಾದ ಪಂಡಿತ್ ಕಾಶಿನಾಥ ಆಚಾರ್ಯ, ಭದ್ರಾ ಹೋಂ ಅಪ್ಲಾಯನ್ಸೆಸ್ ನ ಮಾಲಕಿಮೇಘ ಆಚಾರ್ಯ, ಭದ್ರಾ ಸಮೂಹ ಸಂಸ್ಥೆಗಳ ಪ್ರವರ್ತಕ ಮಂಜುನಾಥ ಆಚಾರ್ಯ, ಮದ್ವ ಆಚಾರ್ಯಮಾಲ್ಸಿ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಜನಪ್ರತಿನಿಧಿಗಳು, ಗಣ್ಯರು, ಗ್ರಾಹಕರು ಭೇಟಿ ನೀಡಿ ಶುಭಹಾರೈಸಿದರು. ನೂತನ ಶಾಖೆಯ ಪ್ರಥಮ ಗ್ರಾಹಕ ಸಿದ್ದಿಕ್ ಗೂಡಿನ ಬಳಿಯವರನ್ನು ಗೌರವಿಸಲಾಯಿತು. ಬಂಟ್ವಾಳ ಬಸ್ತಿಪಡ್ಪುವಿನಲ್ಲಿ ಅಗ್ನಿಶಾಮಕ ಠಾಣೆಯ ಮುಂಭಾಗ ಭಧ್ರಾ ಹೋಂ ಅಪ್ಲೈಯನ್ಸ್ ಪ್ರಧಾನ ಕಚೇರಿ ಹಾಗೂ ಶೋರೂಂ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ…
ಬಂಟ್ವಾಳ: ಕ್ಷಯ ರೋಗಿಗಳ ಆರೋಗ್ಯ ದೃಷ್ಟಿಯಿಂದ ಪ್ರತಿ ತಿಂಗಳು ಆಹಾರದ ಕಿಟ್ ವಿತರಿಸುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮೂರ್ತಿ ಹೇಳಿದರು. Advertisement ಕ್ಷಯ ಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ನಡೆದ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕ್ಷಯರೋಗದ ಜಾಗೃತಿಯ ಬಗ್ಗೆ ಹಾಗೂ ರೋಗ ನಿವಾರಣೆ ಮಾಡುವ ದೃಷ್ಟಿಯಿಂದ ಸೇವಾಂಜಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಕ್ಷಯ ರೋಗಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. Advertisement Advertisement ತುಂಬೆ ಯಾದವ ಸುವರ್ಣ ಮಾತನಾಡಿ ರೋಗಿಗಳಿಗೆ ಔಷಧಿ, ಆಹಾರದ ಜೊತೆಗೆ ಪ್ರೀತಿಯ ವಾತವರಣ ಇದ್ದಾಗ ಶೀಘ್ರ ರೋಗ ಗುಣಪಡಿಸಲು ಸಾಧ್ಯವಿದೆ. ಅಂತಹ ಸೇವಾ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ ಎಂದರು.ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,…
ಬಂಟ್ವಾಳ: ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕ ವೃಂದದ ನಿಷ್ಠೆ ಮತ್ತು ಪಾತ್ರ ಮಹತ್ತರವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು. Advertisement ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನೋತ್ಸವ ನೆನಪಿನಲ್ಲಿ ಬಂಟವಾಳದ ಬಂಟರ ಭವನದಲ್ಲಿ ಗುರುವಾರ ನಡೆದ ಜಿಲ್ಲಾಡಳಿತ ಮತ್ತು ದ.ಕ.ಜಿ.ಪಂ., ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ – 2024ನ್ನು ಉದ್ಘಾಟಿಸಿ ಅವರು ಮಾತನಾಡಿದರು. Advertisement ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಬಣ್ಣ ಹಚ್ಚಿ ಕಾಯಿಸುವುದು ಸರಿಯಲ್ಲ, ಮಕ್ಕಳ ಪ್ರತಿಭೆಯನ್ನು ನೋಡಲು ಪೋಷಕರು, ಗ್ರಾಮಸ್ಥರು ಆಗಮಿಸಿರುತ್ತಾರೆ. ಜನಪ್ರತಿನಿಧಿಗಳು, ಗಣ್ಯರಿಗಾಗಿ ಸಣ್ಣ ಮಕ್ಕಳನ್ನು ಕಾಯಿಸದೆ ಶಿಕ್ಷಕರು ಕಾರ್ಯಕ್ರಮ ನಡೆಸಬೇಕು, ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸೂಚಿಸಿದರು. ನಗರ…
ಬಂಟ್ವಾಳ: ಕಲಾ ಸಂಕುಲ ಸಂಸ್ಥೆ (ರಿ.) ರಾಯಚೂರು ಇವರ ವತಿಯಿಂದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ರಾಯಚೂರು ನಗರದ ರಂಗಮಂದಿರದಲ್ಲಿ ಸೆ. 8 ನಡೆಯಲಿದ್ದು ಶಿಕ್ಷಕ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಆಯ್ಕೆಯಾಗಿದ್ದಾರೆ. Advertisement Advertisement ಶಾಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪಠ್ಯೇತರ ಚಟುವಟಿಕೆಗಳು ಹಾಗೂ ಶಾಲಾ ಭೌತಿಕ ಅಭಿವೃದ್ಧಿಗೆ ತೊಡಗಿಸಿಕೊಂಡು ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಗುರುತಿಸಿ ರಾಜ್ಯಮಟ್ಟದ “ಶಿಕ್ಷಕರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ, ಸಣ್ಣ ನೀರಾವರಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹಾಗೂ ರಾಯಚೂರು ಸಂಸದ ಜಿ.ಕುಮಾರ್ ನಾಯಕ್ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್ ಪ್ರಕಟಣೆಯಲ್ಲಿ…








