Author: admin
ಬಂಟ್ವಾಳ: ದ.ಕ. ಜಿಲ್ಲಾ ಪಂಚಾಯತಿ, ಬಂಟ್ವಾಳ ತಾಲೂಕು ಕೃಷಿ ಇಲಾಖೆ ಇದರ ಆಶ್ರಯದಲ್ಲಿ ಆರ್‌ಐಡಿಎಫ್ ಯೋಜನೆಯಡಿ , ಕೆಆರ್‌ಡಿಐಎಲ್ ಸಂಸ್ಥೆಯ ವತಿಯಿಂದ ೨೫ ಲಕ್ಷ ರೂಪಾಯಿ ವೆಚ್ಚದ ಸುಸಜ್ಜಿತ ಬಂಟ್ವಾಳ ಹೋಬಳಿ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಹಾಲು ಉತ್ಪಾದಕರ ಸಂಘದ ಬಳಿ ಇರುವ ಕೃಷಿ ಇಲಾಖೆಯ ಸ್ಥಳದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಶಿಲಾನ್ಯಾಸ ನೆರವೇರಿಸಿದರು. Advertisement ಬಳಿಕ ಅರ್ಹ ಫಲಾನುಭವಿ ಕೃಷಿಕರಿಗೆ ಶಾಸಕ ರಾಜೇಶ್ ನಾಕ್ ಕೃಷಿ ಯಂತ್ರೋಪಕರಣ, ತುಂತುರು ನೀರಾವರಿ ಘಟಕ, ಮಣ್ಣು ಆರೋಗ್ಯ ಕಾರ್ಡ್, ಎಸ್‌ಎನ್‌ಎಸ್ ಯೋಜನೆಯಡಿ ಉಚಿತ ಕಿಟ್‌ಗಳನ್ನು ವಿತರಿಸಿದರು. Advertisement ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ, ಸಂಗಬೆಟ್ಟು ಗ್ರಾ.ಪಂ. ಸದಸ್ಯ ಸತೀಶ್ ಪೂಜಾರಿ, ಸಂಗಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ವ್ಯವಸಾಯಿಕ…
ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ಒಟ್ಟು 445.45 ಕೋಟಿ ವ್ಯವಹಾರ ನಡೆಸಿ, 1.68 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು. Advertisement ಸಿದ್ದಕಟ್ಟೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ 1947 ರಲ್ಲಿ ಬಿ. ಕೃಷ್ಣ ರೈ ರವರ ಅಧ್ಯಕ್ಷತೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದ್ದು , ಬಂಟ್ವಾಳ ತಾಲೂಕಿನ 7 ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಒಟ್ಟು 8ಗ್ರಾಮಗಳ ವ್ಯಾಪ್ತಿಯನ್ನು ಸಂಘ ಒಳಗೊಂಡಿದೆ. 2023-24ನೇ ಸಾಲಿನ ವರ್ಷಾಂತ್ಯಕ್ಕೆ 54.39 ಕೋಟಿ ಠೇವಣಿ ಹೊಂದಿದ್ದು , ವರದಿ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು 55 ಕೋಟಿ ಸಾಲ ವಿತರಿಸಲಾಗಿದೆ, ಹೊರ ಬಾಕಿ ಸಾಲವು 98.24 ಕೋಟಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ 98ರಷ್ಟು ವಸೂಲಾತಿಯಾಗಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಅಡಿಟ್ ವರದಿಯಲ್ಲಿ ಎ ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದರು. Advertisement 2023-24…
ಬಂಟ್ವಾಳ: ತಾಲೂಕು ಹಿಂದಿ ಭಾಷಾ ಶಿಕ್ಷಕ ಸಂಘದ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ, ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕ ಸಂಘ ಬೆಂಗಳೂರು, ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದೊಂದಿಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಹಿಂದಿ ದಿವಾಸ ಕಾರ್ಯಕ್ರಮ ನಡೆಯಿತು. Advertisement ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರ ಭಾಷೆಯಾಗಿರುವ ಹಿಂದಿ ಹೃದಯದ ಭಾಷೆ. ಎಲ್ಲ ಹಿಂದಿ ಭಾಷಾ ಶಿಕ್ಷಕರನ್ನು ಸಂಘಟಿಸಿಕೊಂಡು ಪ್ರತೀ ವರ್ಷ ಹಿಂದಿ ದಿವಾಸ್ ಆಚರಿಸಿಕೊಂಡು ಬರುತ್ತಿರುವುದು ಅಭಿದನೀಯ ಎಂದು ಹೇಳಿದರು. Advertisement ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಉದ್ಯೋಗ ಅಥವಾ ಇನ್ನಿತರ ಕಾರಣಗಳಿಗೆ ಹೊರ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಾಗ ಹಿಂದಿ ಭಾಷೆಯ ಅಗತ್ಯವಿದೆ. ಶಾಲೆಯಲ್ಲಿ ಪಠ್ಯದ ಜೊತೆಗೆ ಹಿಂದಿ ಭಾಷೆ ಕಲಿಕೆಯ ಅಭಿಯಾನವನ್ನು ಆರಂಭಿಸಿದರೆ ವಿದ್ಯಾರ್ಥಿಗಳು ವ್ಯಾಕರಣ ಬದ್ದವಾಗಿ ಹಿಂದಿ ಮಾತನಾಡಲು ಸಾಧ್ಯವಿದೆ ಎಂದು ತಿಳಿಸಿದರು. Advertisement ಕಾರ್ಯಕ್ರಮದಲ್ಲಿ…
ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ವು 20 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ “ವಿಂಶತಿ ಸಂಭ್ರಮ 2023-24,ವರ್ತಕರ- ಗ್ರಾಹಕರ ಮಹಾಸಂಗಮ” ಕಾರ್ಯಕ್ರಮವು ಸೆ.20 ರಿಂದ 22 ರವರೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ. ಮಂಗಳವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು,ಸೆ.20 ರಂದು ನಮ್ಮ ಸಂಸ್ಥೆ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಯೋಜನೆಯಲ್ಲಿ ನಡೆಯುವಗೃಹೊಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿತಿನಸುಗಳ ಮಹಾಮೇಳ,ಆರೋಗ್ಯ ತಪಾಸಣೆ,ದಿವ್ಯಾಂಗರ ಸಮಸ್ಯೆಗಳ ಜಾಗೃತಿಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ ಎಂದರು. ಸೆ.21 ರಂದು “ವಿಂಶತಿ ಸಂಭ್ರಮ- ಸದಸ್ಯರ ಸಮಾಗಮ” ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ.ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಆಶೀರ್ವಚನ ನೀಡಲಿದ್ದು,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್,ಸಂಸದ ಕ್ಯಾ.ಬ್ರಿಜೇಶ್ ಚೌಟ,ಶಾಸಕ ರಾಜೇಶ್ ನಾಯ್ಕ್ ,ಮಾಜಿ ಸಚಿವ ರಮಾನಾಥರೈ ಸಹಿತ ಹಲವಾರು ಗಣ್ಯರು ಭಾಗವಹಿಸುವರು.ಈ…
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಧಾನಿಯವರಿಗೆ ದೀರ್ಘ ಆಯುಷ್ಯ ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಸಿಹಿ ತಿಂಡಿ ಹಂಚಿ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರುಈ ಸಂದರ್ಭ ಬಿಜೆಪಿ ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಮಹಾ ಶಕ್ತಿ ಕೇಂದ್ರದ ಪ್ರಭಾರಿ ಭರತ್ ರಾಜ್ ಗಟ್ಟಿ, ವೈಷ್ಣವಿ ಎಂಟರ್ ಪ್ರೈಸಸ್ ಮಾಲಕ ಹಾಗೂ ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರ ಜಗನ್ನಾಥ ಸಾಲಿಯಾನ್ ತುಂಬೆ, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು, ಪ್ರಮುಖರಾದ ಸುಬ್ರಹ್ಮಣ್ಯ ಭಟ್ ನೆತ್ರಕೆರೆ, ಲಿಂಗಪ್ಪ ಕುಲಾಲ್ ತುಂಬೆ, ಸದಾನಂದ ತುಂಬೆ, ಮನೋಹರ್ ಪೆರ್ಲಕೆ , ಸುರಭೀ ಸ್ಟೀಲ್ಸ್ ನ ಮಾಲಕ ನವೀನ್ ಕೊಡ್ಮಣ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. Advertisement Advertisement Advertisement Advertisement
ಮಂಗಳೂರು: ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಸುರತ್ಕಲ್ ಶಾಖೆ ಹಾಗೂ ಉತ್ಪನ್ನಗಳ ಮಾರಾಟ ಮಳಿಗೆಯು ಸುರತ್ಕಲ್ ನ ಅಂಚೆ ಕಚೇರಿ ಮುಂಭಾಗದಲ್ಲಿರುವ ಶಂಕರ ಸದಸನದಲ್ಲಿ ಶುಭಾರಂಭಗೊಂಡಿತು. Advertisement ನೂತನ ಶಾಖೆ ಹಾಗೂ ಮಾರಾಟ ಮಳಿಗೆಯನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸವಿತಾ ಸೌಹಾರ್ದ ಸಹಕಾರಿ ಸಂಘ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯಿಂದ ಸುರತ್ಕಲ್ ಪರಿಸರದ ಜನರಿಗೆ ಉಪಯೋಗವಾಗಲಿದೆ ಎಂದರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗ್ರಾಹಕರು ಸಾಲ ಪಡೆಯಲು ಸಾಕಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಸಹಕಾರಿ ಸಂಘಗಳು ಗ್ರಾಹಕನ ವಿಶ್ವಾಸದ ಮೇಲೆ ವ್ಯವಹಾರ ಮಾಡುತ್ತವೆ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿ ಸಂಘದಿಂದ ಸಾಧ್ಯವಾಗಿದೆ ಎಂದ ಅವರುಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಕ್ಷೌರಿಕ ವೃತ್ತಿ ಮಾಡುವವರಿಗೆ ನೂತನ ಮಳಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು. Advertisement Advertisement ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ…
ಬಂಟ್ವಾಳ ತಾಲೂಕು 2024-25 ನೇ ಸಾಲಿನ ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಭೆ ಇಂದು ಬಿ ಸಿ ರೋಡಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಇಂದು ಶನಿವಾರ ನಡೆಯಿತು.ನೂತನ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನವೀನ್ ಎನ್ ದೇವಾಡಿಗ.ಗೌರವ ಅಧ್ಯಕ್ಷರಾಗಿ ಜಗನ್ನಾಥ ಅಳಿಕೆ.ಗೌರವ ಸಲಹೆಗಾರಾಗಿ ಮೋಹನ್ ದಾಸ್ ಕೊಟ್ಟಾರಿ ಕಲ್ಲಡ್ಕ.ಕಾರ್ಯದರ್ಶಿ ಸತೀಶ್ ಸಿದ್ಧಕಟ್ಟೆ.ಜೊತೆ ಕಾರ್ಯದರ್ಶಿ ಉಷಾ ಪಿಲಾತಬೆಟ್ಟು,ಖಜಾಂಚಿ ಗಣೇಶ್ ಕೇಪು.ಆಯ್ಕೆಯಾದರು. Advertisement Advertisement Advertisement Advertisement
Advertisement Advertisement Advertisement advertisement ಬಂಟ್ವಾಳ: ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ವಿದ್ಯಾರ್ಥಿಗಳಾದ ಸಂದೀಪ್, ಜತಿನ್ ಅಯ್ಯಪ್ಪ , ಗೀತೇಶ್, ರಕ್ಷಾ ಮತ್ತು ಅನನ್ಯ ಇವರು ಬಹುಮಾನಗಳನ್ನು ಪಡೆದಿರುತ್ತಾರೆ. ಈ ಪೈಕಿ ಸಂದೀಪ್ ಮತ್ತು ಜತಿನ್ ಅಯ್ಯಪ್ಪ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಪ್ಪೆಪದವು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇದರ ಆಶ್ರಯದಲ್ಲಿ ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ ಲೈನ್ ವಿರೋಧಿಸಿ ಕುಪ್ಪೆ ಪದವು ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. Advertisement Advertisement ಪ್ರತಿಭಟನಕಾರರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ 400 ಕೆ.ವಿ. ವಿದ್ಯುತ್ ಪ್ರಸರಣ ಜಾಲಾದಿಂದ ಜನರಿಗೆ ಇಷ್ಟು ತೊಂದರೆ ಯಾಗುತ್ತಿದ್ದರೂ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು. ಕಂಪೆನಿಯಿಂದ ಹಣ ಪಡೆದು ಕೊಂಡು ನಾಯಕತ್ವ ವಹಿಸಿ ಕೊಂಡು ಬರುವವರನ್ನು ದೂರ ಇಡಬೇಕು, ಭೂಮಿಗೆ ಅನ್ಯಾಯ ಮಾಡಿದವರು ಯಾರೂ ಸುಖವಾಗಿಲ್ಲ. ಬೇರೆ ಕಂಪೆನಿಯನ್ನು ಬೆಳೆಸಲು ನಮ್ಮಭೂಮಿಯನ್ನು ಕಂಪೆನಿಗೆ ಮಾರುವುದು ಸರಿಯಲ್ಲ ಎಂದು ಆರೋಪಿಸಿದರು.ಹೋರಾಟಗಾರ ಚಂದ್ರಹಾಸ ಶೆಟ್ಟಿ ಇನ್ನಾ ಮಾತನಾಡಿ 400 ಕೆ.ವಿ ವಿದ್ಯುತ್ ಪ್ರಸರಣ ಅನುಷ್ಠಾನಗೊಂಡರೆ ತೊಂದರೆಗೆ ಒಳಗಾಗುವುದು ಭೂಮಿ ಮಾರಿದವರಲ್ಲ. ಭೂಮಿ ಮಾಲಿಕರು ಪರಿಹಾರ ಪಡೆದು ಬೇರೆಡೆ ಜೀವನ ಭದ್ರ ಪಡಿಸಿಕೊಳ್ಳುತ್ತಾರೆ. ಸಮಸ್ಯೆ ಅನುಭವಿಸುವವರು ಇಲ್ಲಿ ಇರುವವರು, ಸುತ್ತಮುತ್ತಲಿನ ಜನರು. 46…
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ 4 ದಿನ ಆರಾಧಿಸಲಾದ 45 ನೇ ವರ್ಷದ ಭವ್ಯ ಶೋಭಾಯಾತ್ರೆ ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿ ವಿಜ್ರಂಭಣೆಯಿಂದ ನಡೆಯಿತು Advertisement Advertisement Advertisement ಶ್ರೀ ಗಣೇಶನ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಟ್ಯಾಬ್ಲೋಗಳು, ಹುಲಿ ಕುಣಿತ, ಗೊಂಬೆ ಜುಣಿತ, ಚೆಂಡ ವಾದನ ಶೋಭಾಯಾತ್ರೆಗೆ ಮೆರುಗು ನೀಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಿ.ಸಿ.ರೋಡಿನ ರಸ್ತೆ ಇಕ್ಕೆಲ, ಕಟ್ಟಡಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿ ಕೊಂಡರು. ಶೋಭಾಯಾತ್ರೆ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಕೈಕಂಬದತ್ತ ಸಾಗಿತು. Advertisement








