
ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾಮಹೋತ್ಸವ ಫೆ. ೧೬ರಿಂದ ಫೆ. ೨೩ರವರೆಗೆ ನಡೆಯಲಿದ್ದು ಶಕ್ರವಾರ ಸಂಜೆ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕೈಕಂಬದ ಪೊಳಲಿ ದ್ವಾರದ ಬಳಿ ಹೊರೆಕಣಿಕೆ ಮೆರವಣಿಗೆಗೆ ಪೊಳಲಿ ಶ್ರೀರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಯಮಿ ರಘುಸಪಲ್ಯ ಚಾಲನೆ ನೀಡಿದರು. ಭಜನಾ ತಂಡ, ಬಣದ ಕೊಡೆಗಳು, ಕಲಶ ಹೊತ್ತ ಮಹಿಳೆಯರು, ಚೆಂಡೆ, ಗೊಂಬೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಕೈಕಂಬದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿ ಬಂದು ದೇವಸ್ಥಾನದಲ್ಲಿ ಸಮಾಪನಗೊಂಡಿತು.


ಈ ಸಂದರ್ಭ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಕಾರ್ಯಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್, ವಿವಿಧ ಸಮಿತಿಯ ಪದಾಧಿಕಾರಿಗಳಾದ ವಿಜಯಪ್ರಸಾದ್, ಅಶ್ವನಿ ಕುಮಾರ್ ರೈ, ಸದಾನಂದ ಶೆಟ್ಟಿ, ಐತ್ತಪ್ಪ ಆಳ್ವ ಸುಜೀರುಗುತ್ತು, ಚಿತ್ತರಂಜನ್ ಶೆಟ್ಟಿ, ದೇವದಾಸ್ ಶೆಟ್ಟಿ, ಹರೀಶ್ ಎಂ.ಆರ್., ಸತೀಶ್ ಕುಮಾರ್, ನಾಗೇಶ್ ಸಾಲ್ಯಾನ್, ಐತ್ತಪ್ಪ ಪೂಜಾರಿ, ವಿಶ್ವನಾಥ ಬಿ. ಸದಾಶಿವ ಕೈಕಂಬ, ಜಗನ್ನಾಥ ಶೆಟ್ಟಿ, ಮುರುಗೇಶ್, ಕೆ. ನಾರಾಯಣ ಹೆಗ್ಡೆ, ಇಂದಿರೇಶ್, ಬಿ. ಮೋಹನ್, ದಿನೇಶ್ ಕುಮಾರ್, ಬೇಬಿ ಕುಂದರ್, ಅಶೋಕ್ ಶೆಟ್ಟಿ ಸರಪಾಡಿ, ಮಚ್ಚೇಂದ್ರ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಊರ ಪರವೂರ ಭಕ್ತರು ನೀಡಿದ ಅಪಾರ ಪ್ರಮಾಣದ ಹೊರೆಕಾಣಿಕೆ ದೇವಸ್ಥಾನಕ್ಕೆ ಸಂದಾಯವಾಯಿತು.
