ಬಂಟ್ವಾಳ: ಬಿ.ಸಿ.ರೋಡಿನ ಕುಲಾಲರ ಮಠದ ಶ್ರೀ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಸ ಪರಮಹಂಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ರಾಮದಾಸ್ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ನಾಗೇಶ್ ಸಾಲ್ಯಾನ್, ಸುದರ್ಶನ್ ಬಜ, ವಿಶ್ವನಾಥ ಬಿ., ಗೋಪಾಲ ಸುವರ್ಣ, ಟ್ರಸ್ಟ್ನ ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ ಸಿ. ಗಾಂದೋಡಿ, ಉಪಾಧ್ಯಕ್ಷ ಕೆ. ಗಂಗಾಧರ, ಗೌರವಾಧ್ಯಕ್ಷರಾದ ಚಂದಪ್ಪ ಮೂಲ್ಯ, ಮಂಜುನಾಥ ಮೂಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ಮೋಹನ್, ಅಧ್ಯಕ್ಷ ಕೃಷ್ಣಪ್ಪ ಬಿ., ಕಾರ್ಯಾಧ್ಯಕ್ಷ ಬಿ. ಕುಮಾರ್, ಪ್ರಧಾನ ಕಾರ್ಯದರ್ಶಿ ರವಿರಾಜ್ ಮಠ, ಕಾಐದರ್ಶಿ ಭಾಸ್ಕರ ಕಾಮಾಜೆ, ಕೋಶಾಧಿಕಾರಿ ರೇಷ್ಮಾ ವಿನಯ್, ಸಂಚಾಲಕ ಸೇಸಪ್ಪ , ಸಹಸಂಚಾಲಕ ಸುಕುಮಾರ್, ಉಪಾಧ್ಯಕ್ಷರಾದ ನಾರಾಯಣ ಪೆರ್ನೆ, ವಾಮನ ಕುಲಾಲ್ , ಕಿಶೋರ್ ಬಸ್ತಿಪಡ್ಪು, ಲಕ್ಷ್ಮಣ್ ಅಗ್ರಬೈಲು, ಕೇಶವ ದೈಪಲ, ರಮೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು