ಬಂಟ್ವಾಳ: ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಮಳೆ, ಬಿಸಿಲಿಗೆ ಪರಿತಪಿಸುತ್ತಿದ್ದ ಸಜೀಪ ಮೂಡ ಗ್ರಾಮದ ಮಿತ್ತಮಜಲು ನಿವಾಸಿಗಳಾದ ಭಾಗಿ ಮತ್ತು ಕಮಲ ಎಂಬವರಿಗೆ ಸ್ಥಳೀಯ ಯುವ ಎಂಜಿನಿಯರ್, ಸಜೀಪಮೂಡ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆಯವರು ಮನೆ ನಿರ್ಮಿಸಿ ಕೊಟ್ಟಿದ್ದು ಫೆ. 29ರಂದು ಗುರುವಾರ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಗಣಹೋಮ ನಡೆಯಲಿದೆ. ಬಳಿಕ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು, ಸಜೀಪಮೂಡ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸುವರು, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಕೆ. ಸಂಜೀವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸಜೀಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಕರೀಂ ಬೊಳ್ಳಾಯಿ, ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಕುಚ್ಚಿಗುಡ್ಡೆ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಬಿ.ಕೆ. ಸೇಸಪ್ಪ ಬೆದ್ರಕಾಡು ಭಾಗವಹಿಸುವರು.
ಮನೆಗೆ ಆಧಾರವಾಗಿದ್ದವೆರೆಲ್ಲ ಅನಾರೋಗ್ಯದಿಂದ ಮೃತಪಟ್ಟು ಜೀವನ ನಿರ್ವಹಣೆಗೂ ಸಂಕಷ್ಟ ಪಡುತ್ತಿದ್ದ ಭಾಗಿ ಮತ್ತು ಕಮಲ ಎಂಬವರು ಸರಿಯಾದ ಸೂರಿಲ್ಲದೆ ಟರ್ಪಾಲಿನ ಜೋಪಡಿಯೊಂದರಲ್ಲಿ ವಾಸಿಸುತ್ತಿದ್ದರು. ಹೊಟ್ಟೆ, ಬಟ್ಟೆಗೂ ಹಣವಿಲ್ಲದೆ ಪರಿತಪಿಸುತ್ತಿದ್ದ ಈ ಕುಟುಂಬದ ದಯಾನೀಯ ಸ್ಥಿತಿಯನ್ನು ಕಂಡು ಶೈಲೇಶ್ ಪೂಜಾರಿಯವರು ಮನೆ ನಿರ್ಮಿಸಿ ಕೊಡುವ ಸಂಕಲ್ಪತೊಟ್ಟು ಸುಮಾರು 3.5 ಲಕ್ಷ ರೂಪಾಯಿಯ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಶೈಲೇಶ್ ಪೂಜಾರಿಯವರ ಮಾನವೀಯ ಸ್ಪಂದನೆ ಬಡಕುಟುಂಬಕ್ಕೆ ಆಸರೆ ನೀಡಿದೆ. ಇವರ ಸೇವಾ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
—