ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಬಂಟ್ವಾಳ ತಾಲೂಕು
ಜಿಲ್ಲಾ ಸಮಿತಿ ವತಿಯಿಂದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇಗುಲದಲ್ಲಿ ಶುಕ್ರವಾರ ಮುಂಜಾನೆ ರಥಸಪ್ತಮಿಯ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.
Advertisement
Advertisement
Advertisement
ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗ್ರಾಮಣಿಗಳಾದ ವೆಂಕಟರಮಣ ಮುಚ್ಚಿನ್ನಾಯ ಕಳ್ಳಿಮಾರ್ ಚಾಲನೆ ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ ಸಂಚಾಲಕ ಹರೀಶ, ಜಿಲ್ಲಾ ಸಹಸಂಚಾಲಕ ನಾರಾಯಣ, ಜಿಲ್ಲಾ ಶಿಕ್ಷಣ ಪ್ರಮುಖ್ ಹರೀಶ, ತಾಲೂಕು ಶಿಕ್ಷಣ ಪ್ರಮುಖ್ ಗಣೇಶ, ತಾಲೂಕು ಸಹಸಂಚಾಲಕಿ ನಯನ, ತಾಲೂಕು ವಿಸ್ತರಣಾ ಪ್ರಮುಖ್ ಕಿಶೋರ್ ಭಾಗವಹಿಸಿದ್ದರು. ಶಿವಶಂಕರ್ ರಥಸಪ್ತಮಿಯ ವಿಶೇಷತೆಯ ಬಗ್ಗೆ ಬೌದ್ಧಿಕ್ ನೀಡಿದರು, ಶಕುಂತಳ ನಿರೂಪಿಸಿ, ಹೇಮಂತ್ ವಂದಿಸಿದರು.
Advertisement