ಸುಳ್ಯ: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಷ್ರೀಯ ಕೃಷಿ ಸಂಶೋಧನಾ ನಿರ್ವಹಣೆ ಅಕಾಡಮಿ, ಹೈದ್ರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಪೇರಾಲು ಗ್ರಾಮದಲ್ಲಿ ಹಮ್ಮಿಕೊಳಲಾಗಿತು. ನಾರ್ಮ, ಹೈದ್ರಾರಾಬಾದ ಪ್ರಧಾನ ವಿಜ್ಞಾನಿ ಡಾ. ಬಾಲಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ದೊರಕುವ ಸಾವಯವ ವಸ್ತುಗಳನ್ನು ಎರೆಹುಳುಗಳನ್ನು ಬಳಸಿ ಅದನ್ನು ಪೋಷಕಾಂಶವುಳ್ಳ ಸಾವಯವ ಗೊಬ್ಬರಗಳನ್ನಾಗಿ ಮಾರ್ಪಾಡಿಸಿ ತಮ್ಮ ಕೃಷಿ ಕ್ಷೇತ್ರದ ಬೆಳೆಗಳಿಗೆ ಉಪಯೋಗಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮಂಗಳೂರು ಡಾ. ಟಿ. ಜೆ. ರಮೇಶ, ಮಂಡೆಕೋಲು ಗ್ರಾ.ಪಂ. ಸದಸ್ಯೆ ಶಶಿಕಲಾ ಭಾಗವಹಿಸಿದರು. ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈರವರು ಎರೆಹುಳ ಗೊಬ್ಬರ ತಯಾರಿಸುವ ವಿಧಾನ, ಎರೆಹುಳದ ಜೀವನಚಕ್ರ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಮುಖಾಂತರ ತರಬೇತಿಯನ್ನು ನಡೆಸಿಕೊಟ್ಟರು. ಮಾಧವ ಕೆ. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಭವಾನಿಶಂಕರ್ ವಂದಿಸಿದರು. ಗ್ರಾಮದ ೩೦ ಜನ ರೈತರು ತರಬೇತಿಯಲ್ಲಿ ಭಾಗವಹಿಸಿದರು.