ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಇದರ ಬೋಳಂತೂರು ಸ್ಥಳಾಂತರಗೊಂಡ ಶಾಖೆಯ ಉದ್ಘಾಟನಾ ಸಮಾರಂಭ ಸೋಮವಾರ ಬೋಳಂತೂರು ಗ್ರಾಮದ ಉತ್ತಮ ನಗರದಲ್ಲಿ ನಡೆಯಿತು.

ಆದರ್ಶ ಸೊಸೈಟಿಯ ನಿರ್ದೇಶಕ ಮಹಾಬಲ ರೈ ಹೊಸಮನೆ ಶಾಖೆ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ೧೩ ಶಾಖೆಗಳು ಉತ್ತಮವಾಗಿ ಕಾರ್ಯಹಿಸುತ್ತಿದ್ದು ಮುಂದಿನ ದಿನಗಳಲ್ಲಿ ವೇಣೂರು ಹಾಗೂ ಬಿ.ಸಿ. ರೋಡಿನಲ್ಲಿ ಹೊಸ ಶಾಖೆಗಳು ಆರಂಭಗೊಳ್ಳಲಿವೆ. ೨೫ ಶಾಖೆಗಳನ್ನು ಹೊಂದಿ ೧೦೦ ಮಂದಿ ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡುವ ಚಿಂತನೆ ಆಡಳಿತ ಮಂಡಳಿಯ ಮುಂದಿದೆ ಎಂದರು. ಪ್ರಾಮಾಣಿಕತೆ ಹಾಗೂ ನಂಬಿಕೆಯಿಂದ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಸಂಘ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ. ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಶ್ರಮಜೀವಿಯಾಗಿರುವ ಸಂಜೀವ ಪೂಜಾರಿಯವರ ದೂರದೃಷ್ಟಿಯ ಯೋಜನೆಯ ಫಲವಾಗಿ ಇಂದು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ಆರಂಭಗೊಂಡು ಬಡವರ ಆರ್ಥಿಕ ಸಂಷ್ಟಕ್ಕೆ ನೆರವಾಗಿದೆ. ಇನ್ನಷ್ಟು ಹೊಸ ಶಾಖೆಗಳು ಆರಂಭಗೊಂಡು ಸಂಘ ಪ್ರಗತಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಬೋಳಂತೂರು ಗ್ರಾ.ಪಂ ಸದಸ್ಯ ಚಂದ್ರಶೇಖರ ರೈ ಮಾತನಾಡಿ ಸಜೀಪಮುನ್ನೂರು ಮೂರ್ತೇದಾರರ ಸಹಕಾರಿ ಸಂಘದ ಮೊದಲ ಶಾಖೆ ಆರಂಭಗೊಂಡಿರುವುದು ಬೊಳಂತೂರಿನಲ್ಲಿ ಎನ್ನವುದು ನಮ್ಮ ಗ್ರಾಮಕ್ಕೆ ಹೆಮ್ಮೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೋಳಂತೂರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ಕಟ್ಟಡ ಮಾಲಕ ನಾರಾಯಣ ಪೂಜಾರಿ, ನಿರ್ದೇಶಕ ರಮೇಶ್ ಅನ್ನಪ್ಪಾಡಿ ಉಪಸ್ಥಿತರಿದ್ದರು.
ಬೋಳಂತೂರು ಗ್ರಾ.ಪಂ. ಸದಸ್ಯರಾದ ಅಶ್ರಫ್ ಹಾಗೂಅನ್ಸಾರ್, ಸಂಘದ ನಿರ್ದೇಶಕರಾದ ವಿಠಲ ಬೆಳ್ಚಾಡ, ಅಶೋಕ್ ಪೂಜಾರಿ ಕೋಮಾಲಿ, ಕೆ.ಸುಜಾತ ಮೋಹನದಾಸ, ವಾಣಿ ವಸಂತ್, ಅರುಣ್ ಕುಮಾರ್, ಆಶಿಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ. ಎಂಜಿನಿಯರ್ ಶೈಲೇಶ್ ಪೂಜಾರಿ ಹಾಗೂ ಸಂಘದ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಶಂಕರ್ ಕಾನ್ಸಲೆ ವಂದಿಸಿದರು.
