
ಬಂಟ್ವಾಳ: ಕೂಡಿಬೈಲು ಬಸದಿಯಲ್ಲಿ ನಡೆದ. ಜೈನ್ಮಿಲನ್ ಐದನೇ ಮಾಸಿಕ ಸಭೆಯಲ್ಲಿ ಜೈನ್ ಮಿಲನ್ ಬಂಟ್ವಾಳ ಮತ್ತು ಕೂಡಿಬೈಲು ಬಸದಿ ಹಾಗೂ ಪಾಣಂತಬೈಲು ಬಸದಿಯ ಆಡಳಿತ ಸಮಿತಿಯ ಸಹಯೋಗದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು
ಜೈನ್ಮಿಲನ್ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಬೈಲು ಬಸದಿ ಆಡಳಿತ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್, ಎಕ್ಸೆಲ್ ಪದವಿಪೂರ್ವ ಕಾಲೇಜಿನ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಎಸ್ಡಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಎ. ಅರ್ಕಕೀರ್ತಿ ಹೆಗ್ಡೆ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಸರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್,
ನಿವೃತ್ತ ಉಪಪ್ರಾಂಶುಪಾಲ ಉದಯಕುಮಾರ್ ಬಿ.ಮಧ್ವ, ನಿವೃತ್ತ ಶಿಕ್ಷಕಿ ರಾಜಮ್ಮ ಪದ್ಮಶೇಖರ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಆದಿರಾಜ್ ಕೆ. ಜೈನ್, ನಿವೃತ್ತ ಅಂಚೆ ಪಾಲಕ ಬಾಲಚಂದ್ರ ಜೈನ್, ಎಸ್ಡಿಎಂ ದಂತ ಕಾಲೇಜಿನ ನಿವೃತ್ತ ಮೇಲ್ವಿಚಾರಕ ಯುವರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ಜೈನ್ ಮಿಲನ್ ವಲಯ ೮ರ ಉಪಾಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಭಾಗವಹಿಸಿದ್ದರು. ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳನ್ನು ಗೌರವಿಸಲಾಯಿತು.
ಪಾರ್ಶ್ವನಾಥ್ ಕಕ್ಕೆಪದವು ಸ್ವಾಗತಿಸಿದರು. ಕಾರ್ಯದರ್ಶಿ ಜಯಕೀರ್ತಿ ವರದಿ ವಾಚಿಸಿದರು. ಸಂದೇಶ ಇಂದ್ರ ಕೂಡಿಬೈಲು ವಂದಿಸಿದರು. ಭರತ್ಕುಮಾರ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


Advertisement







