
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೇವಾಂಜಲಿ ಸಂಗೀತ ತರಗತಿ ಯ ವಾರ್ಷಿಕೋತ್ಸವ ಭಾನುವಾರ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಸೇವಾಂಜಲಿ ಸಂಸ್ಥೆ ಧಾರ್ಮಿಕ, ಆರೋಗ್ಯ, ಶಿಕ್ಷಣ ಸೇವೆ ನೀಡುವುದರ ಜೊತೆಗೆ ಭಾರತೀಯ ಶಾಸ್ತ್ರೀಯ ಕಲೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುತ್ತಿರುವುದು ಅಭಿನಂದನೀಯ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ದೇವದಾಸ್ ಮಾತನಾಡಿ ರಾಗ, ಭಾವ, ತಾಳ, ಸ್ವರಗಳ ಸಮ್ಮೀಲನವೇ ಸಂಗೀತ, ಮನಸ್ಸಿಗೆ ಮುದ ನೀಡುವುದರ ಜೊತೆಗೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಯುತ ಸಾಧನ ಎಂದರು.



ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಮಾತನಾಡಿ ಸೇವಾಂಜಲಿಯ ಕಾರ್ಯಚಟುವಟಿಕೆಯ ಬಗ್ಗೆ ತಿಳಿಸಿದರು. ಸಂಗೀತ ಗುರುಗಳಾದ ಕೃಷ್ಣಾಚಾರ್ಯ ನರಿಕೊಂಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮ್ಯಾ ರಂಜನ್ ಸುಜೀರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಯೋಲಿನ್ ನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಉಡುಪಿ,
ಮೃದಂಗದಲ್ಲಿ ಶ್ಯಾಂ ಭಟ್ ಸುಳ್ಯ, ಕೊಳಲಿನಲ್ಲಿವ ಅಪ್ರಮೇಯ ತೋಳ್ಪಾಡಿ ಸಹಕರಿಸಿದರು.
ಪ್ರಮುಖರಾದ ಸೇವಾಂಜಲಿ ಟ್ರಸ್ಟಿ ದೇವುದಾಸ್ ಶೆಟ್ಟಿ , ಪದ್ಮನಾಭ ಕಿದೆಬೆಟ್ಟು ಕೊಡ್ಮಾಣ್, ಶಿವರಾಜ್ ಸುಜೀರು, ಪ್ರಶಾಂತ್ ತುಂಬೆ, .ವಿದ್ಯಾ ಸುಜೀರ್, ಗಾಯಾತ್ರಿ, ಶೋಭಾ
ಉಪಸ್ಥಿತರಿದ್ದರು.

Advertisement







