
ಬಂಟ್ವಾಳ: ಫರಂಗಿಪೇಟೆ ಬಳಿಯ ಕುಂಪಣಮಜಲುವಿನ ಶ್ರೀ ದುರ್ಗಾಪರಮೇಶ್ವರಿ ವಾರಾಹಿ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಸಂಧ್ಯಾ ಭಜನೆಯ 108 ನೇ ವಿಶೇಷ ಸಂಧ್ಯಾ ಭಜನೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗವಹಿಸಿದರು.

ಅಂಬುರುಹ ಮಕ್ಕಳ ಕುಣಿತ ಭಜನಾ ತಂಡ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಹವ್ಯಾಸಿ ಭಜಕ ವೃಂದ ಅಂಬ್ಲ ಮೊಗರು ಇವರಿಂದ ಭಜನೆ ನಡೆಯಿತು. ಕುಮಾರ್ ಮಲೆಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.


Advertisement







