
ಬಂಟ್ವಾಳ: ಇತ್ತೀಚಿಗೆ ನಿಧನರಾದ ಕುರ್ನಾಡು ಮಿತ್ತಕೋಡಿ ನಿವಾಸಿ ಭೋಜ ಬಿ ಯವರ ಶ್ರದ್ದಾಂಜಲಿ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ , ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾರಾಸಂ ಬಂಟ್ವಾಳ ಮತ್ತು ಮುಡಿಪು ಕುಲಾಲ ಸಂಘ ಗಳ ಸಂಯೋಜನೆಯೊಂದಿಗೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ರಮೇಶ್ ಸಂಚಯಗಿರಿ, ಹಿರಿಯ ನಾಗರಿಕರ ಸಂಘದ ಸೇಸಪ್ಪ ಮಾಸ್ಟರ್ , ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಂಘದ ಮಾಜಿ ಅಧ್ಯಕ್ಷ ಮಚೇಂದ್ರ ಸಾಲಿಯಾನ್ , ಸಂಘದ ಮಾಜಿ ಕಾರ್ಯದರ್ಶಿ ಲಕ್ಷಣ್ ಅಗ್ರಬೈಲ್ , ಮಾಜಿ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ನುಡಿ ನಮನ ಸಲ್ಲಿಸಿದರು. ನೂರಾರು ಹಿತೈಷಿಗಳು ಕಾರ್ಯಕ್ರಮದಲ್ಲಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಕೇಶವ ಮಾಸ್ಟರ್ ನಿರೂಪಿಸಿ, ರಾರಾಸಂ ಫೌಂಡೇಷನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಂದಿಸಿದರು


ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಹಿರಿಯ ಸದಸ್ಯರು, ನಮ್ಮ ಸಂಘದ ಆರಂಭದ ದಿನಗಳಿಂದಲೇ ಪದಾಧಿಕಾರಿಯಾಗಿ ದುಡಿದ ಅನುಭವ ಇವರದು, 1984/85/86 ರಲ್ಲಿ ದಿ.ಹೂವಯ್ಯ ಮೂಲ್ಯರು ಅಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿ , ಕೋಶಾಧಿಕಾರಿಯಾಗಿ ದುಡಿದವರು. ಮುಂದೆ ಮುಡಿಪು ಸಂಘದಲ್ಲಿ ಸಕ್ರಿಯರಾಗಿ, ಮುಡಿಪು ಕುಲಾಲ ಸಂಘದ ಎರಡು ಅವಧಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನರ ಪ್ರೀತಿ ಸಂಪಾದಿಸಿದವರು. ಹಲವು ವರ್ಷಗಳಿಂದ ಬಂಟ್ವಾಳ ಯುವಜನ ವ್ಯಾಯಾಮ ಶಾಲೆಯಲ್ಲಿ ಸಕ್ರಿಯ ಸದಸ್ಯರಾಗಿದ್ದು, ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.


Advertisement







