ಬಂಟ್ವಾಳ: ವೆಲಂಕಣಿ ಆರೋಗ್ಯ ಮಾತೆ ದೇವಾಲಯ ಫರ್ಲಾ, ಇಲ್ಲಿಯ ಸ್ತ್ರೀ ಸಂಘಟನೆಯ ರಜತ ಮಹೋತ್ಸವವು ಭಾನುವಾರ ನಡೆಯಿತು. ದಿವ್ಯ ಬಲಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ಕಾರ್ಯಕ್ರಮ ನೆರವೇರಿತು.
ಚರ್ಚಿನ ಧರ್ಮಗುರು ವಂ. ಜೋನ್ ಪ್ರಕಾಶ್ ಪಿರೇರಾ ಮಾತನಾಡಿ ಕುಟುಂಬ, ಸಮಾಜ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದಾಗಿದ್ದು, ೨೫ ವರ್ಷಗಳ ಅವಧಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲಾ ಸ್ತ್ರೀಯರನ್ನು ಸ್ಮರಿಸಿದರು. ಧರ್ಮ ಪ್ರಾಂತ್ಯದ ಸ್ತ್ರೀ ಸಂಘಟನೆಯ ನಿರ್ದೇಶಕರಾದ ವಂ ಫ್ರಾನ್ಸಿಸ್ ಡಿಸೋಜರವರು ಮಾತನಾಡಿದರು.
ವೇದಿಕೆಯಲ್ಲಿ ಪ್ರಥಮ ಅಧ್ಯಕ್ಷೆ ಐರಿನ್ ಮಸ್ಕರೇನ್ಹಸ್, ವಂ.ಅರುಣ್ ರೊಡ್ರಿಗಸ್, ಪ್ರಾಂತೀಯ ಅಧ್ಯಕ್ಷೆ ಗ್ರೇಟ್ಟಾ ಪಿಂಟೋ, ವಲಯ ಅಧ್ಯಕ್ಷೆ ಗ್ರೇಟ್ಟಾ ಫೆರ್ನಾಂಡಿಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು. ಈವರೆಗೆ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಹಾಗೂ ವಿಶೇಷ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.
ವಿವಿಧ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಅಧ್ಯಕ್ಷೆ ಐರಿನ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜೊಯ್ಸ್ ಡಿಸೋಜರವರು ವರದಿ ವಾಚಿಸಿದರು.
ಝೀಟಾ ಮಿನೇಜಸ್ ಹಾಗೂ ಸುನೀತಾ ಕಾರ್ಯಕ್ರಮ ನಿರೂಪಿಸಿದರು.