ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡ ಇದರ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಪಿ. ಮಾತನಾಡಿ ಕೆ. ಎಸ್.ಹೆಗ್ಡೆ ಆಸ್ಪತ್ರೆಯವರೊಂದಿಗೆ ಕೈ ಜೋಡಿಸಿಕೊಂಡು ಕೃಷ್ಣಕುಮಾರ್ ಪೂಂಜ ಅವರು ಕಳೆದ ೪೦ ವರ್ಷಗಳಿಂದ ಸೇವಾ ಕಾರ್ಯಕಮವನ್ನು ನಡೆಸಿಕೊಂಡು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ, ಕ್ಷಯ ರೋಗಿಗಳು ಇಲ್ಲಿ ನೀಡುವ ಪೌಷ್ಟಿಕ ಆಹಾರವನ್ನು ಸೇವಿಸಿಕೊಂಡು ರೋಗ ಮುಕ್ತರಾಗಿ ಆರೋಗ್ಯವಂತ ಜೀವನ ನಡೆಸಬೇಕೆಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೭ ತಿಂಗಳಿನಿಂದ ಈ ಕಾರ್ಯಕ್ರಮವನ್ನು ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಡಸಿಕೊಂಡು ಬರುತ್ತಿದ್ದೇವೆ. ಸುಮಾರು ೬ ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದ್ದು ಈವರೆಗೆ ಸುಮಾರು ೯೮ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ನೀಡಲಾಗಿದೆ ಎಂದರು.
ಬ್ಯಾಂಕ್ ಆಫ್ ಬರೋಡ ಅರ್ಕುಳ ಶಾಖೆಯ ಪ್ರಬಂಧಕ ಎಂ. ಪ್ರಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಸುನೀಲ್ ಫೆರ್ನಾಂಡೀಸ್ ಅಬ್ಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟಿಗಳಾದ ದೇವದಾಸ್ ಶೆಟ್ಟಿ ಕೊಡ್ಮಾಣ್ ವಂದಿಸಿದರು,ತೇವು ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಸುಕುಮಾರ್ ಅರ್ಕುಳ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ, ದಿನೇಶ್ ತುಂಬೆ
ಆಶಾ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು