
ಬಂಟ್ವಾಳ: ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಸಂಸ್ಕಾರ ನಮ್ಮದಾಗಬೇಕು,
ಭಜನೆಯಿಂದ ಮನ ಮತ್ತು ಮನೆ ಎರಡೂ ಪರಿವರ್ತನೆ ಯಾಗುತ್ತದೆ. ಮನ ಪರಿವರ್ತನೆ ಯಾದಾಗ ವ್ಯಕ್ತಿ ಧೀಶಕ್ತಿ ಪಡೆಯುತ್ತಾನೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.
ಅವರು ಶ್ರೀ ಮೂಕಾಂಬಿಕಾ ಕೃಪಾ ಭಜನಾ ಮಂದಿರ (ರಿ)ಬ್ರಹ್ಮರಕೂಟ್ಲು ಇಲ್ಲಿ ಶುಕ್ರವಾರ ನಡೆದ ೫೨ನೇ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದೇವರ ನಾಮಸ್ಮರಣೆಯಲ್ಲಿ ಶಕ್ತಿ ಇದೆ. ಅದರಿಂದ ನಮ್ಮ ಪಾಪ ಪರಿಹಾರ ವಾಗುತ್ತದೆ. ಪ್ರೀತಿ ಹಾಗೂ ಭಕ್ತಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಹೃದಯ ಕಮಲದಲ್ಲಿ ಶ್ರೀ ರಾಮನನ್ನು ಪ್ರತಿಷ್ಠಾಪಿಸಿ ಭಕ್ತಿಯ ರಸವನ್ನು ದೇವರಿಗೆ ಸಮರ್ಪಿಸಬೇಕು ಎಂದು ತಿಳಿಸಿದರು. .

ಜವಳಿ ಉದ್ಯಮಿ ಎಂ.ಪಿ.ದಿನೇಶ್ ಮಾತನಾಡಿ ನಮ್ಮಲ್ಲಿ ಭಾವ ಭಕ್ತಿ ಇಲ್ಲದಿರುರುವುದರಿಂದ ನಮ್ಮ ಪುಣ್ಯ ಕ್ಷೇತ್ರಗಳ ಪ್ರಾಮುಖ್ಯತೆ ಗೊತ್ತಾಗುವುದಿಲ್ಲ. ಸನಾತನ ಧರ್ಮದ ಬಗ್ಗೆ ಹೆಚ್ಚೆಚ್ಚು ಅರ್ಥೈಸಿಕೊಂಡು ನಮ್ಮ ಧರ್ಮಕ್ಕೆ ಏನು ಕೊಡಲು ಸಾಧ್ಯ ಎನ್ನುವುದನ್ನು ತಿಳಿದು ಕೊಳ್ಳಬೇಕು. ಭಗವಂತನ ನಾಮ ಸ್ಮರಣೆಯಿಂದ ಆತ್ಮೋದ್ಧಾರ ವಾಗಲಿದೆ ಎಂದರು. ಏಕಹ ಭಜನೆಗೆ ಸಹಕರಿಸಿದವರನ್ನು ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಗೌರವಿಸಿದರು. ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಆರೋಗ್ಯ ಸಹಾಯನಿಧಿ ಸಮರ್ಪಿಸಲಾಯಿತು. ವೇದಿಕೆಯಲ್ಲಿ ಜ್ಯೋತಿಗುಡ್ಡೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಚಾಲಕ ನಾರಾಯಣ ನಾಯ್ಕ್, ಉದ್ಯಮಿ ಚಿತ್ತಾರಂಜನ್ ಸುವರ್ಣ ಮೂಡಬಿದಿರೆ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಕೇರಳ ಕೇಂದ್ರೀಯ ವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಚೇತನ್ ಮುಂಡಾಜೆ, ಆಡಳಿತ ಸಮಿತಿಯ ಗೌರವಧ್ಯಕ್ಷ ಶಶಿಧರ ಬ್ರಹ್ಮರಕೊಟ್ಲು, ವಾರ್ಷಿಕ ಏಕಾಹ ಭಜನಾ ಸಮಿತಿಯ ಅಧ್ಯಕ್ಷ ನಾಗೇಶ್ ಶೆಟ್ಟಿ ಪಿರಿಯೋಡಿ ಬೀಡು, ಶ್ರೀ ಮೂಕಾಂಬಿಕಾ ಮಾತೃ ಮಂಡಳಿಯ ಅಧ್ಯಕ್ಷೆ ಗೀತಾ ಆನಂದ ಪೆರಿಯೋಡಿ ಬೀಡು ಉಪಸ್ಥಿತರಿದ್ದರು.

ಮೂಕಾಂಬಿಕಾ ಕೃಪಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿ, ಅಧ್ಯಕ್ಷ ನವೀನ ಬಂಗೇರ ಪಲ್ಲ ಪ್ರಾಸ್ತವಿಕವಾಗಿ ಮಾತನಾಡಿದರು. ವಾರ್ಷಿಕ ಭಜನಾ ಸಮಿತಿಯ ಪ್ರ. ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ ವಂದಿಸಿದರು. ಅಕ್ಷಯ್ ಸರಿಪಲ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಿಯುಗದ ಮಾಯ್ಕರೆ ತುಳು ಪೌರಾಣಿಕ ನಾಟಕ ನಡೆದು ಜನ ಮೆಚ್ಚುಗೆ ಪಡೆಯಿತು. ಬೆಳಿಗ್ಗೆ ಜಗನ್ಮಾತೆ ಶ್ರೀ ಮೂಕಾಂಬಿಕೆಯ ಪುನಃ ಬಿಂಬ ಪ್ರತಿಷ್ಠೆ, ಹಾಗೂ ಕಲಶಾಭಿಷೇಕವು ಪುರೋಹಿತರಾದ ರಾಜ ಭಟ್ ನೂಯಿ ಪೊಳಲಿ ಇವರ ನೇತ್ರದಲ್ಲಿ ನಡೆಯಿತು.
