
ಬಂಟ್ವಾಳ: ಭವತಿ ಬಿಕ್ಷಾಂ ದೇಹಿ ಬಡವರ ಬಂಧು ಸೇವಾ ತಂಡ ಕುಕ್ಕಿಪಾಡಿ ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ 10ನೇ ಸೇವಾ ಯೋಜನೆಯ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ (ರಿ.) ವಾಮದಪದವು ಘಟಕ, ಸೂಕ್ತ ನ್ಯೂಸ್, ಸಿದ್ದಕಟ್ಟೆ ಬಂಟ್ವಾಳ, ಟೀಮ್ ಒಳಿತು ಮಾಡು ಮನುಷ ಸೇವಾ ತಂಡ ಪುತ್ತೂರು, ತೆಲಿಕೆದ ಕಲಾವಿದೆರ್ ಕೊಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚ, ಆಶ್ರಮವಾಸಿಗಳಿಗೆ ಅನ್ನದಾನ ಸಹಾಯಾರ್ಥವಾಗಿ ಬಡವರ ಬಂಧು ಸಹಾಯ ನಿಧಿ ಕಾರ್ಯಕ್ರಮ ಜನವರಿ 7ರ ಆದಿತ್ಯವಾರ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಹಾಗೂ ಆಯ್ದ ಬಡ ಕುಟುಂಬಕ್ಕೆ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಲಿದೆ. 10ನೇ ಸೇವಾ ಯೋಜನೆಯ ಫಲಾನುಭವಿಗಳ ಸಹಾಯಾರ್ಥವಾಗಿ ಟಿಕೆಟ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
