ಬಂಟ್ವಾಳ: ಭಾನುವಾರ ಬ್ರಾಹ್ಮೀಮುಹೂರ್ತದಲ್ಲಿ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ೨೨ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು ನಡೆಸಲಾಯಿತು. ಬೆಳಗ್ಗೆ ಹಣತೆ ಮೂಲಕ ದೀಪ ಬೆಳಗಿಸಿ ವಿವಿಧ ರೂಪಗಳಲ್ಲಿ ದೇವಸ್ಥಾನವನ್ನು ಅಲಂಕರಿಸಲಾಯಿತು.
Advertisement
Advertisement
Advertisement
ಕಾಕಡಾರತಿ, ಜಾಗರ ಪೂಜೆ, ವಿಶೇಶಾಲಂಕಾರ ಬಳಿಕ ವಿಶ್ವರೂಪದರ್ಶನ, ಪ್ರಸಾದ ವಿತರಣೆ ನಡೆಯಿತು. ವಿಶ್ವಕಪ್ ಪಂದ್ಯಾದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಆಶಿಸುವ ಹೂವು ಹಾಗೂ ದೀಪಗಳಿಂದ ಅಲಂಕರಿಸಿದ ಕಲಾಕೃತಿ ಗಮನ ಸೆಳೆಯಿತು. ಈ ಸಂದರ್ಭ ಶಿಲೆ ಶಿಲೆ ಹಕ್ಕಿನ ಮೋಕ್ತೇಸರರಾದ ಬಿ. ಸೂರ್ಯನಾರಾಯಣ ಬಾಳಿಗ, ಆಡಳಿತ ಮೋಕ್ತೇಸರ ಬಿ. ಅಶೋಕ್ ಶೆಣೈ, ಮೋಕ್ತೇಸರರಾದ ಭಾಮಿ ನಾಗೇಂದರ ಶೆಣೈ, ಬಿ.ಸುರೇಶ್ ವಿ. ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.
Advertisement