ಬಂಟ್ವಾಳ: ಐಡಿಯಲ್ ಕಾಶ್ಯು ಇಂಡಸ್ಟ್ರೀಸ್ ಶೇರಾ ಇಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಹಿರಿಯ ಮಾರ್ಗದರ್ಶಕ ಜೆ ಕೆ ನಾಯರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಕೆಲಸಮಾಡುವ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಅಗತ್ಯ ಅಂತಹ ಸಿಬ್ಬಂದಿಗಳು ನಮ್ಮಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಸಹೃದಯಿ ಸಿಬ್ಬಂದಿಗಳ ಬೇಕು ಬೇಡ ಗಳಿಗೆ ಸ್ಪಂದಿಸುವ ಮಾಲಕರು ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಪರವಾಗಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವೇದಿಕೆ (ರಿ) ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ನಿವೃತ್ತ ಪ್ರಾಚಾರ್ಯ ಎಸ್.ಮಹೇಶ್ವರ ಭಟ್, ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್.ರಾವ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಮಾಲಕರಾದ ಎಸ್. ಗಂಗಾಧರ್ ಶೇರಾ ಸ್ವಾಗತಿಸಿದರು. ಮಲ್ಲಿಕಾ ಗಂಗಾಧರ್, ನೂತನ್ ಕುಮಾರ್, ವತನ್ ಕುಮಾರ್ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶ್ರೀಧರ್ ಶೆಟ್ಟಿ, ಚಂದ್ರಶೇಖರ್, ಪುರುಷೋತ್ತಮ್, ಕೃಷ್ಣಪ್ಪ ಪೂಜಾರಿ, ಸುಭಾಸ್, ಉಮೇಶ್,ದೇಜಪ್ಪ ಪೂಜಾರಿ, ಸೌಮ್ಯ, ಶ್ರೀಜಾ,ಧನಲಕ್ಶ್ಮೀ, ರೇವತಿ, ಸವಿತಾ,ವೀಣಾ ಸಹಕರಿಸಿದರು. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಿಸಲಾಯಿತು.